ಕಾವ್ಯ ಸಂಗಾತಿ
ಡಾ. ನಿರ್ಮಲ ಬಟ್ಟಲ ಕವಿತೆಗಳು
ಮನ್ವಂತರ
ಯಾಕೊ ಗೊತ್ತಿಲ್ಲ
ಇತ್ತಿತ್ತಲಾಗಿ ಕವಿತೆಗಳೇ
ಹುಟ್ಟುತಿಲ್ಲ….
ಭಾವಗಳು ಉಕ್ಕುತ್ತಿಲ್ಲ
ಬಿಸಿಯ ತಾಪಕೆ
ಹಾಲುಕ್ಕಿದಂತೆ….
ಎಳೆ ಎಳೆದು
ಪದಗಳ ಜೋಡಿಸಿದರೆ
ಚೆಂದವೆನೊ ಕಾವ್ಯ ಮಾಲೆ…
ಶಬ್ಧ ಶೃಂಗಾರದ
ಭಾವ ಸುಗಂಧವಿಲ್ಲದ
ಮಧುವಿಲ್ಲದ ಮಧು ಶಾಲೆ…
ಕಾಡುತ್ತಿಲ್ಲ ಭಾವಗಳು
ಕನಸು ಮನಸೊಳಗೆ
ಹಿಂಬಲಿಸಿ ಪದವಾಗಲು….
ಬಿಡದೆ ಕಾಡುವ
ಭಾವಗಳು ಸೋಲುತ್ತಿವೆ
ಪಾದವಾಗಿಸಲಾಗುತ್ತಿಲ್ಲ….
ಕೈಬಿಡಬೇಕೆಂದಿರುವೆ
ಪದ್ಯಬರೆಯುವುದನ್ನು
ಇನ್ನ ಮುಂದೆ….
ಬರೆಯಲಾಗದ ಕವಿತೆಗಳನು
ಕಥೆಯಾಗಿಸುವಷ್ಟು
ಸರಕಿರುವಾಗ….
ಪಾತ್ರ, ಚಿತ್ರ ಸನ್ನಿವೇಶ
ಜೀವ ಕೊಟ್ಟರೆ
ಕಾದಬಂರಿಯಾದರೂ ಆದಿತು….
**
ಹೊರಟಳರಸಿ
ಸೂರ್ಯ ಮುಳುಗದ
ನಾಡಿನ ಅರಸಿ
ಮೌನ ಮೆರವಣಿಗೆಯಲಿ
ವಿಶ್ರಮಿಸುತ್ತಿದ್ದಾಳೆ….
ಹಲವು ದಶಕಗಳ ಕಾಲ
ಜಗವನಾಳಿದ ಸಾಮ್ರಾಜ್ಞಿ
ಮಣ್ಣಲಿ ಮಣ್ಣಾಗುವಾಗ
ಅತ್ತುಕರೆದು ಶಿಸ್ತು ಮುರಿವ ಹಾಗಿಲ್ಲ..
ವಜ್ರ ವೈಢೂರ್ಯ
ಕೊರಳ ಮುತ್ತಿನ ಹಾರ
ಇಮಡಿಗೋಳಿಸಿತವಳ ಶೃಂಗಾರ
ಗತ್ತಿನ ಅಧಿಕಾರ….
ಕಿರೀಟ ಆಡಳಿತಾಧಿಕಾರ
ಸೈನ್ಯ ಪ್ರಜಾ ಸಮೂಹ
ಹಿಂಬಾಲಿಸುತ್ತಿದೆ ಮಣ್ಣಾಗುವ ಅವಳ ಗೋರಿಯವರೆಗೆ.….
ಡಾ. ನಿರ್ಮಲ ಬಟ್ಟಲ
ಹೃದ್ಯವಿದು ನಿಮ್ಮ ಪದ್ಯ.. ಕೈಬಿಡಬೇಡಿ ಸದ್ಯ
ಧನ್ಯವಾದಗಳು ಸರ್ ತಮ್ಮ ನಲ್ಮೆಯ ಪ್ರತಿಕ್ರಿಯೆಗೆ
Beautiful poems
Ri
Thanks
Yamuna
ಕವಿತೆ ಚೆನ್ನಾಗಿವೆ.
ಚೆಂದದ ಕವಿತೆಗಳು
ಕವಿತೆಗಳು ತುಂಬಾ ಚೆನ್ನಾಗಿವೆ mam
superrrrr mam
ಪದ್ಯ ಭಾರತೀಯ ಬದುಕಿನ ಪಡೆನುಡಿ.
ಅದನ್ನ ಪಠಿಸುತ್ತಲೆ ಇದ್ದಿರಿ. ಅದರ ಅಭಾವವೆ ನಿಮ್ಮ ಪದ್ಯದಲ್ಲಿ ನಿರಾತಂಕವಾಗಿ ಮೂಡಿ ಬಂದಿದೆ.
ಕಾವ್ಯ ಸೊಗಸಾಗಿದೆ.
Nice composition… Congrats…