ಹಮೀದಾ ಬೇಗಂ ದೇಸಾಯಿ ಕವಿತೆ-ಗುರು- ಕಾರುಣ್ಯ

ಕಾವ್ಯಸಂಗಾತಿ

ಗುರು- ಕಾರುಣ್ಯ

ಹಮೀದಾ ಬೇಗಂ ದೇಸಾಯಿ

ನನ್ನ ಹೊತ್ತು ಹೆತ್ತು
ಎತ್ತಿ ಆಡಿಸಿ, ಕೈ ತುತ್ತು
ಉಣಿಸಿ ಬೆಳೆಸಿದ ನನ್ನವ್ವ
ಕರುಣಾಮಯಿ ಗುರು…

ಅರಳಿದ ಹೂವ ಕಂಡು
ಹಾರುವ ಚಿಟ್ಟೆ ನೋಡಿ
ನಗುವ ಕಲಿಸಿದ ಚೆಲುವ
ಪ್ರಕೃತಿ ನನ್ನ ಗುರು…

ನಯವಿನಯಗಳ ಕಲಿಸಿ
ಒಳಿತು ಕೆಡುಕುಗಳ ತಿಳಿಸಿ
ಪ್ರೇಮ ಕರುಣೆಯ ಬೆಳೆಸಿದ
ಹಿರಿ -ಕಿರಿಯರೆಲ್ಲರೂ ನನ್ನ ಗುರು…

ಅಕ್ಷರ ಜ್ಞಾನವ ಬೋಧಿಸಿ
ಸನ್ಮಾರ್ಗದಲ್ಲಿ ನಡೆಯಲು
ಬದುಕಿನ ದಾರಿ ದೀಪವಾದ
ಕಾರುಣ್ಯ ಮೂರ್ತಿಗಳು ನನ್ನ ಗುರು ….!
ನನ್ನ ಎಲ್ಲ ಗುರುಗಳಿಗೆ ಕೋಟಿ ನಮನಗಳು…


Leave a Reply

Back To Top