ಕಾವ್ಯ ಸಂಗಾತಿ
ಮಾಜಾನ್ ಮಸ್ಕಿಯವರ ಸಾಲುಗಳು
1.
ನಮ್ಮ ವಿನಯ ಸರಳತೆ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ
ಜಾನ್!!
ಮೃದು ಗುಲಾಬಿಯಾಗದೆ ಚುಚ್ಚುವ ಮುಳ್ಳುಗಳಾಗಲೇಬೇಕು.
2.
ಈ ದೇಹದಲ್ಲಿ ಜೀವ ಇರುವವರೆಗೆ ಮಾತ್ರ ಸ್ವಾರ್ಥಿಗಳಾಗಿ ಬದುಕುತ್ತೇವೆ
ಜಾನ್
ಮತ್ತೆ ಸತ್ತ ಮೇಲೆ ನಮ್ಮ ಶವವನ್ನು ಬೇರೆಯವರು ಯಾಕೆ ಹೊರಬೇಕು??
3.
ಇಲ್ಲಿ ಎಲ್ಲರೂ ಪ್ರೀತಿಸುವವರೆ ಇದ್ದಾರೆ
ಜಾನ್
ಆದರೆ ನಂಬಿಕೆ ಮೋಸ ಹೋಗುತ್ತಿದೆ…
4.
ನಮ್ಮೆಲ್ಲರ ತಾಯಂದಿರು ನಮ್ಮನ್ನು ಸ್ವಲ್ಪವು ಹೇಸಿಕೊಳ್ಳದೆ ಬೆಳೆಸುತ್ತಾಳೆ ಅಲ್ಲವೇ
ಜಾನ್!?
ಮತ್ಯಾಕೆ ಅವರ ವೃದ್ದ್ಯಾಪಕ್ಕೆ ನಾವುಗಳು ಸಿಂಡರಿಸಿ ದೂರ ತಳ್ಳುತ್ತೇವೆ??
ಮಾಜಾನ್ ಮಸ್ಕಿ