ಕಾವ್ಯಸಂಗಾತಿ
ಸಂಮೋಹಕ
ಡಾ ಡೋ ನಾ ವೆಂಕಟೇಶ
ಈಗ ಗೆಳೆಯ
ಸೂರ್ಯ ವಿರಮಿಸುವ ಹೊತ್ತು
ತೇಜ ಕುಂದುವ ಹೊತ್ತು
ಗೆಳೆತನ ಕಿಡಿದಾಡುವ ಹೊತ್ತು
ನನ್ನ ಲಂಗೋಟಿ ಗೆಳೆಯ
ನಿನ್ನ
ಲಗೋರಿ ಆಟದ ಚುರುಕು
ಕಲಿಯುವಾಸೆಯ ಸೆಳೆತ,
ತುಡಿತ
ಬೆಳೆದದ್ದು ಮೆರೆದದ್ದು
ಕುರಿ ಮಂದೆಯವನಾಗದೇ
ಸಿಂಹದ ಮರಿಯಾದದ್ದು
ಅತುಳ ವಿತುಳ ಸುತುಳ
ಪಾತಾಳದಿಂದ ಮೇಲೆದ್ದು
ತ್ರಿವಿಕ್ರಮನಾಗಿ ಬೆಳೆದದ್ದು
ನಿನ್ನ
ಸಾಧನೆ ಸಂಕೀರ್ತನೆ
ಏಯ್ ಜೀವದ ಗೆಳೆಯ
ನಿನ್ನ ಬಾಲ್ಯ ನನ್ನ ಬಾಲ್ಯ
ನೆನಪಿಸುವ ಈ ಕನಸು
‘ ಆಕಾಶದಲ್ಲೊಂದು ಕೋಟೆ
ಕೋಟೆಯಲ್ಲೊಬ್ಬ ರಾಜ
ಮತ್ತೋರ್ವ ಮಂತ್ರಿ
ಬೇರೆಲ್ಲರೂ ಕಂತ್ರಿ’
ಈ ಆಗಸಕ್ಕೆ ಏಣಿ ಹಾಕುವ
ಆಟ
ಚಟವಾಯಿತು ನಿನ್ನ ಓಟ
ನಾಗಾಲೋಟ
ಹೌದು ಈ ವಿಚಿತ್ರ ಪ್ರಪಂಚಕ್ಕೆ
ಬೇಕು ನಿನ್ನ ಗೆಳೆತನ
ನಿನ್ನ ಪ್ರೀತಿ ವಿಶ್ವಾಸಗಳ
ಭೋರ್ಗೆರೆವ ಸೆಳೆತ
ಸಂವೇದನೆ, ಸಮಾನ
ಸಂಶೋಧನೆ ಹಾಗೂ ಪರಿಶುದ್ಧ
ಸಂವಹನತೆ!!
ಬೇಕು ನಿಮ್ಮ ಗೆಳೆತನ. ಜತೆಯಲ್ಲಿ ಪ್ರೀತಿ ಮತ್ತು
ವಿಶ್ವಾಸ ತುಂಬಿರಲಿ
ಹೌದು ಬೇಕು ನಿಮ್ಮ ಗೆಳೆತನ, ಪ್ರೀತಿ, ವಿಶ್ವಾಸ.ಮಂಜಣ್ಣ!!
Beautiful ❤️
Thank you Guddi
Lovely poem!
Thank you very much Usha!
ಕುರಿ ಮಂದೆಯಾಗದೆ ಸಿಂಹವಾಗಿರುವ ಮಿತ್ರ ವೆಂಕಣ್ಣನ ಕವನ ಬಹಳ ಚೆನ್ನಾಗಿದೆ
ಸಿಂಹದ ಮಿತ್ರ ಸೂರ್ಯ
ನಿಮ್ಮ ಅಭಿಮಾನ, ಪ್ರೀತಿಗೆ ಧನ್ಯವಾದಗಳು