ಕಾವ್ಯ ಸಂಗಾತಿ
ಜಗದ ಪ್ರೀತಿ
ನಾಗಜಯ ಗಂಗಾವತಿ
ಸಾವೆಂಬ ಕದವ ನಾ ತಟ್ಟಿ ಬಂದಿದ್ದೆ
ನಾ ಸಾವ ಬಯಸಿ.
ಸಾಯುವುದು ಲೇಸೊ, ಬದುಕುವುದು ಲೇಸೊ ತಿಳಿಯದೆ.
ನಾನಾಗ ಅತ್ತದ್ದು ನನ್ನಂತರಂಗದ ಸೊಲ್ಲ ಸೋಲಿಗೆ.
ನಾ ಕಾಣದಾಗಿದ್ದೆ ಚೇತನವ
ನಿತ್ಯ ತೇಜದ ಅಭಾವದಲ್ಲಿ ನಿರಾಳತೆಯರಸಿ ಹೋಗಿದ್ದೆ
ಸಮತಟ್ಟಿನ ಬದುಕು ಬಿಟ್ಟು.
ಹೂವ ಹಾಸಿಗೆಯ ಮಗ್ಗಲು ಬಿಟ್ಟು.
ಅತ್ತು ಅತ್ತು ಕೊರಗಿದಾಗ ಹೊಳೆದದ್ದು
ನಿಜದ ಸೊಲ್ಲು.
ಸಾವು ತೆಗೆದು ಕೊಳ್ಳುವ , ಕೊಳ್ಳುವ ವಸ್ತುವಲ್ಲ
ಅದು ತಾನಾಗೆರೊರಗುವ ಎರಗುವ ನಿಸ್ತೇಜ ಭಾವ.
ಏರುಪೇರುಗಳು, ಗೊದ್ದಗಳು, ಗೊಂದಲಗಳಿದ್ದಾವು
ನನಗಲ್ಲದೆ ಮತ್ತಾರಿಗವು…
ಅಂತೆ ನಾ ಸಾವಿನ ಕದ ಮುಚ್ಚಿ ಬಂದಿದ್ದೆ.
ಸಚೇತನದ ಪಾಡಾಗಿ ಉಳಿದು
ಉಚಿತ ಸಾವು’ ಗೆ ಈಡಾಗೊ ಹಂಬಲಕ್ಕೆ.
ಬದುಕಿಗೆ ಎದೆ ಕೊಟ್ಟು ; ಹೆಗಲೂ ಕೊಡುವುದಕ್ಕೆ…
ನಾ ಉಳಿದಿದ್ದೆ , ಮರಳಿದ್ದೆ…
ಸಾವು ಗೆದ್ದ ಕವನ ಮನಸ್ಸನ್ನು ಗೆದ್ದಿದೆ ಸರ್
ಬಯಸಿದಾಗ ಕಾಣದಿರುವ ಮುಖ ಸಾವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಸಾವು ಖಚಿತವಾದರೂ ಸಾವನ್ನು ಗೆದ್ದು ಬದುಕುವ ಬಗ್ಗೆ ಮನಮುಟ್ಟುವಂತೆ ಉಲ್ಲೇಖಿಸಿದ್ದೀರಿ. ಅಭಿನಂದನೆಗಳು
ದನ್ಯವಾದಗಳು
ಬಯಸಿದಾಗ ಕಾಣದಿರುವ ಮುಖ ಸಾವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಸಾವು ಖಚಿತವಾದರೂ ಸಾವನ್ನು ಗೆದ್ದು ಬದುಕುವ ಬಗ್ಗೆ ಮನಮುಟ್ಟುವಂತೆ ಉಲ್ಲೇಖಿಸಿದ್ದೀರಿ. ಅಭಿನಂದನೆಗಳು
ಗಂಗಾವತಿ ಅಡಿಗರ ಕವಿತೆ ಅಂದಮೇಲೆ ಕೇಳಬೇಕೆ…
ಅಡಿಗಡಿಗೆ ನನ್ನ ಕಾಡುವ ಕಾವ್ಯಗಳು ಅಡಿಗರವು ನಿಜ.
ಅದರೆ ನಾ ಆ ಮಹಾಚೇತನ ಅಡಿಗರ ಅಡಿಯಾಳು.
ಅವರ ಕಾವ್ಯಗಳ ರಸ ಸ್ವಾದ ನನ್ನ ಬೆರಳಿಗೆ ಸಿಕ್ಕಷ್ಟು ಉಂಡವನು. ನಾನವರ ” ಅಡಿ ” ಮಾತ್ರ ಗಂಗಾವತಿ ಅಡಿಗ ಎನ್ನುವುದು ನಿಮ್ಮ ಆಶಿರ್ವಾದ ಎಂದು ಸ್ವಿಕರಿಸುತ್ತೆನೆ….
ಬಹಳ ಚಂದದ ಕವಿತೆ. ಓದಲು ಖುಷಿಯಾಗುತ್ತದೆ. ಅಭಿನಂದನೆಗಳು
ಬದುಕು ಅರ್ಥ್ಯೆಸಿದ ಹಾಡು …….ಚನ್ನಾಗಿದೆ
https://sangaati.in/?p=3
ಸುಂದರ ಸಾಲುಗಳು
ಅಧ್ಭುತ ಬರಹ ಸರ್ ….ನಾನು ಕೇಳಿದ ಹಾಗೆ ಇದು ನಿಮ್ಮ ಅನುಭವಕ್ಕೆ ಬಂದು ಬರೆದ ಕವನ ಎಂದು….ಹೃದಯ ಸ್ಸ್ಪರ್ಶಿ ಸಾಲುಗಳು
ಸಾವನ್ನು ಗೆಲ್ಲುವ ಸಂಗತಿಯೇ ಬಹು ವಿಶಿಷ್ಟ.ಉತ್ತಮ ಕವಿತೆ ಸರ್
ಅದ್ಭುತ ಕವಿತೆ….ಸರ್
ಕಣೋ ನಾನು ಊಹೆ ಮಾಡಿರೋದು ಇದು ನಿನ್ನ ಅನುಭವದಿಂದ ಬಂದಿರೋ ಕವಿತೆ ಅಂತ ಅನ್ಕೊಂಡೆ, ತುಂಬಾ ಚೆನ್ನಾಗಿ ಮೂಡಿದೆ ಹೆಮ್ಮೆ ಆಗುತ್ತೆ ನನಗೆ