ಕಾವ್ಯಸಂಗಾತಿ
ಸ್ಪೂರ್ತಿ
ಸುಲಭಾ ಜೋಶಿ ಹಾವನೂರ
ನಾನೇನೂ ಅರ್ಥಕೋಶವಲ್ಲ ಅರ್ಥ ಹಾಗೆ ಉಳಿಯುವುದಕ್ಕೆ.
ದಿನಮಾನಕ್ಕನುಸಾರವಾಗಿ ಶಬ್ದ ಸೂರಗಿರಬಹುದು.
ಅರ್ಥ ಕರಗಿರಬಹುದು.
ಗೂತ್ತಿಲ್ಲ ಸ್ವಾರ್ಥ ಪರಮಾರ್ಥ
ನೀತಿಯಿದ್ದಲ್ಲಿ ಪ್ರತಿ ಪ್ರೀತಿ ಮಾತ್ರ ಗೂತ್ತು.
ಅದು ಸೌಮ್ಯ ಬೆಳಕಿನಲ್ಲಿ ತೂಗಿ ತೇಲುವ
ಹಸಿರು ಮಕಮಲ್ಲು ಹುಲ್ಲು
ಅದು ನನ್ನ ತೋಟದ ಹೂವು
ಮಣ್ಣಿನಲ್ಲಿ ಅರಳಿದ್ದು.
ಅದಕ್ಕೆ ನನಗೆ ಮುಗ್ಧತೆ ಕೋಮಲತೆ ಅಪ್ರಸಿಧ್ಧತೆ
ಮಾತ್ರ ಗೂತ್ತು.
ಶಬ್ದಗಳು ಸೂರಗಿಲ್ಲ,ಭಾವ ಬರಿದಾಗಿಲ್ಲ.
ಸ್ಪೂರ್ತಿಯ ಕಣ್ಣಾಲಿಯ ತುಂಬ
ಜಗವೆಲ್ಲ ಅನುಸಂಧಾನಮಯ.
ಸಂವಾದಮಯ,ಸಂಗೀತಮಯ.
ರಾಗ ಲಯ ತಾಲಮಯ.
ಸ್ಪೂರ್ತಿ ನೀ ಚೈತನ್ಯಪೂರ್ತಿ
ಬಾ,ಕಲ್ಪನೆಯ ಭ್ರುಂಗಕ್ಕೆ
ಕನಕಾಂಬರ ಅರಳಿಸು.
ಅನತಿದೂರದ ವರೆಗೂ ಪರಿಮಳದ ತೆರೆಯೂಳಗೆ
ತೇಲಿ ಬರಲಿ ಅರ್ಥೈಸಿಕೂಳ್ಳುವ ಊರುಗೂಲು.