ಕಾವ್ಯಸಂಗಾತಿ
ಗಜಲ್
ಜಯಶ್ರೀ.ಭಂಡಾರಿ
ಅಸ್ತಿತ್ವ ಮೂಡಿಸುವ ಆತುರದಲ್ಲಿ ಕರುಳ ಬಂದವ ಕಡಿದೆಯಾ ನೀನು.
ಆಸ್ತಿಯ ಹೊಂಚಿಗಾಗಿ ಸಂಬಂಧ ಚಿಗುರಿಸದೆ ದುರುಳನಾಗಿ ಕಾಡಿದೆಯಾ ನೀನು
ಹಿರಿಯರು ಇದ್ದ ಮನೆ ದೇವಮಂದಿರವು ತಿಳಿದು ಬಾಳಿತೋರಿಸಬೇಕು
ಅರಿಯದೇ ನಿನ್ನಾವೇಶಕೆ ಹಂದರಕಟ್ಟಿ ಬಂದುರ ಮರೆತು ಹೊಡಿದಿಯಾ ನೀನು
ಸನ್ಮಾರ್ಗವ ಹಿಡಿದು ಭವಿಷ್ಯತ್ತಿನಲ್ಲಿ ಆದರ್ಶವ ಹೆಣೆದು ಬದುಕಬೇಕು
ದುರ್ಮಾರ್ಗದಿ ನಡೆದು ಸರೀಕರ ಮಾತಿಗೆ ಕಿರುಕುಳ ನೀಡಿದೆಯಾ ನೀನು
ಇಂದಿನ ಪೀಳಿಗೆಯು ಅದೇಕೋ ಹೆತ್ತವರ ಬೆಲೆನೇ ತಿಳಿಯುತ್ತಿಲ್ಲವಲ್ಲಾ
ಅಂದಿನ ಪೂರ್ವಿಕರು ಹೇಗೆ ಬಾಳಿದ್ದರೆಂಬ ಕಲ್ಪನೆ ಮಾಡಿದೆಯಾ ನೀನು.
ಸ್ವಾತಂತ್ರ್ಯ ಸ್ವೆಚ್ಛೆ ಎಂದು ನಂಬಿದ ನಿನಗೆ ಶ್ರೀಯಿಂದಏನೂ ಸಿಗಲಾರದು
ಅತಂತ್ರದ ಗೋಡೆಯ ಮೇಲೆ ಹೆಜ್ಜೆಯಿರಿಸಿ ಕುಪಥದಿ ನಡೆದೆಯಾ ನೀನು
——————–