ಶ್ರೀಕಾಂತಯ್ಯ ಮಠ-ನಾನೊಂದು ಬಗೆದರೆ

ಕಾವ್ಯ ಸಂಗಾತಿ

ನಾನೊಂದು ಬಗೆದರೆ

ಶ್ರೀಕಾಂತಯ್ಯ ಮಠ

ಬೆಳಕು ಬರುತ್ತಲೆ ಮುಂದೆ ಇಟ್ಟೆ ಹೆಜ್ಜೆ
ಕತ್ತಲು ಆವರಿಸಿದಾಗ ಯೋಚನೆಯಲ್ಲಿ ಮುಂದಿಟ್ಟೆ ಹೆಜ್ಜೆ

ಒಂದು ಹೆಜ್ಜೆ ಒಂದೊಂದು ನೆನಪು ವೇದನೆ ಆರ್ಭಟಿಸುತ್ತಿತ್ತು
ಕಣ್ಣೀರು ಇಳಿಯುತ್ತ ಭಾವದ ವಿರಹ ಎದೆಯಲ್ಲಿ ನರ್ತಿಸುತ್ತಿತ್ತು.

ಹೇಗಿರಲಿ ವಿಚಾರವೇನು ಮಾಡಲಿ ದಿನಕ್ಕೊಂದು ಕಷ್ಟ ಪಟಾಕಿಯಂತೆ ಸಿಡಿದಿವೆ.
ಏನಂತ ಹೇಳಲಿ ಯಾವ ಮಾತು ಕೊಡಲಿ ಸಿಡಿದ ಮದ್ದು ಒಡಲು ಸುಟ್ಟಿದೆ.

ಗೆಲುವು ಬರಲಿಲ್ಲ ಆಟವೆ ಬದಲಾಯಿತು
ಸೋಲಿಗೆ ಯಾರು ನೆರವು ಕೊಡಲಿಲ್ಲ ನಿರ್ಣಯವೆ ಬದಲಾಯಿತು.

ತಪ್ಪು ನಿರ್ಧಾರಕ್ಕೆ ಎಡವಿದ ಕಾಲು ಭಾಗಶಃ ರಕ್ತಸಿಕ್ತವಾಗಿತ್ತು
ಒಪ್ಪುವುದೇನಿದೆ ದೇವರಾಟದಲ್ಲಿ ದೇವರ ನಿರ್ಣಯವೆ ಬೇರೆಯಾಗಿತ್ತು.

ತನುವಿಗೆ ಮನಸ್ಸಿಗೆ ಉತ್ಸಾಹ ಕಳೆದು ಹೋಗಿತ್ತು
ದೇಹ ಮಾತ್ರ ಕಂಬದಂತೆ
ಎಂದು ಬೀಳುವುದು ಮೌನದಲ್ಲಿ ಮಾತು ಹೇಳುತ್ತಿತ್ತು.


Leave a Reply

Back To Top