ಗಝಲ್-ಉಷಾಜ್ಯೋತಿ, ಮಾನ್ವಿ

ಕಾವ್ಯ ಸಂಗಾತಿ

ಗಜಲ್

ಉಷಾಜ್ಯೋತಿ ಮಾನ್ವಿ

ಸೃಷ್ಟಿಯ ಅಪರೂಪದ ಜೀವ ಹೆಣ್ಣನು ಬೆಳೆಯಲು ಬಿಡಿ
ಬಾಳಿನ ಆನಂದದ ಭಾವ ಅವಳನು ಉಳಿಯಲು ಬಿಡಿ

ಧರೆಯಲಿ ಸಹನೆಗೆ ಪ್ರತಿರೂಪ ಇವಳೇ ಅಲ್ಲವೇನು
ಜಗದ ವನದ ಮುಗ್ಧ ಕುಸುಮವೇ ನಾರಿ ಅರಳಲು ಬಿಡಿ

ದುಃಖ ದುಮ್ಮಾನಗಳ ಹೊಯ್ದಾಟದಲಿ ನಲುಗುತಿಹಳು
ರೆಕ್ಕೆ ಬೀಸುತ ಸ್ವಚ್ಛಂದವಾಗಿ ಆಗಸದಲಿ ಹಾರಾಡಲು ಬಿಡಿ

ತಾರತಮ್ಯ ನೀತಿ ಬೇಕೇ ಸ್ವಲ್ಪ ದಿನದ ಈ ಬದುಕಿನಲಿ
ಜೊತೆ ಜೊತೆಗೆ ಹೆಜ್ಜೆ ಹಾಕುತ ಮುಂದೆ ಸಾಗಲು ಬಿಡಿ

ಉಷೆಯ ಅಳಲಲ್ಲ ಸ್ತ್ರೀ ಕುಲದ ನಿತ್ಯದ ಗೋಳಿದು
ಕಡೆಗಣಿಸದೆ ಇರುವಿಕೆಗೆ ಒಂದರ್ಥವನು ಗಳಿಸಲು ಬಿಡಿ


Leave a Reply

Back To Top