ಕಾವ್ಯಸಂಗಾತಿ
ಆಕಾಶ ದೀವಿಗೆ
ರಂಗಸ್ವಾಮಿ ಮಾರ್ಲಬಂಡಿ
ನಾಲ್ಕು ಕಾಲಿನ ನಕ್ಷತ್ರ ಪುಂಜ ವೊಂದು
ಆಕಾಶ ದಾರಿಯಲಿ ಪಯಣಿಸುತಿದೆ ಗೆಳತಿ
ಆಕಾಶ ದಾರಿಯಲಿ..!
ಬೆಳಕಿನ ದೀವಿಗೆ ಅರಸುತ್ತಾ…!
ಕತ್ತಲಲ್ಲ ವಿದು ಕಾನನ
ಕಂಡು ಕಾಣದ ಬಾನನ…!
ಜೊತೆಗಾರರು,ಸಹಚರರು
ಗೆಳತಿಯರು, ಗೆಣಸು ಕಿತ್ತುವವರು
ಯಾರಿದ್ದರೇನು…?!
ಕಾಣದ ಕನಸು ಹೊತ್ತವರಿಗೆ..!
ಹಂಬಲ ಮಾತ್ರ ಇದೆ
ದೊರೆಯೇ ಪಾಲಕ ನೆಂದು ..!
ನಂಬದವನು
ನಂಬುತಿರುವನು ಪಾಲಕ ನಿಲ್ಲವೆಂದು ..!
ನಂಬಲು,ನಂಬಿಸಲು ನಂಬದವನ ಪರದಾಟ…!
ಕಂಡೆನೋ ಕಾಣ್ಬೆನೋ
ದೇಹದ ದುಃಖಕ್ಕೆ ಪಾಲಿಕೆಯನು…!
ಹ್ಞಾ…! ಪಾಲಿಕೆಯನು.
ನಗದಿರು ಜಾಸ್ತಿ
ನಗದಿರು,ನಗಬೇಡವೇ…
ನೀನೆ ಪಾಲಿಕೆಯೆಂದು…
ನಕ್ಷತ್ರ ಪುಂಜದ ಆಕಾಶ ದೀವಿಗೆ ಯೆಂದು…!
ಸುಂದರವಾದ ಕವನ