ಸುಕನಸು-ಗಜಲ್

ಕಾವ್ಯ ಸಂಗಾತಿ

ಗಜಲ್

ಸುಕನಸು

ಅಕ್ಕರೆಯ ಸಕ್ಕರೆ ಬೊಂಬೆಯವನು
ಮುದ್ದಿನ ಮುತ್ತಿನ ಕಣ್ಮಣಿಯವನು

ಜೊತೆಯಲಿರೆ ಸಗ್ಗಕೆ ದಾರಿಯವನು
ಜೀವಕೆ ಜೀವ ಸಂಜೀವಿನಿಯವನು

ಕೋಪದಲಿ ಪುಟಾಣಿ ಕಂದನವನು
ನಕಲಿ ನಟರ ನಂಬುವ ಮುಗ್ಧನವನು

ಸಂಬಂಧದಲಿ ತ್ಯಾಗಿ ಕರ್ಣನವನು
ಪ್ರಣಯದಲಿ ಮನ್ಮಥ ರಸಿಕನವನು

ಬರಹದಲಿ ಸರಸ್ವತಿಯ ಪುತ್ರನವನು
ಸುಮಾಳ ಬಾಳಿಗೆ ಭಗವಂತನವನು


Leave a Reply

Back To Top