ಮಾಜಾನ್ ಮಸ್ಕಿ-ಹನಿಗಳು

ಕಾವ್ಯ ಸಂಗಾತಿ

ಹನಿಗಳು

ಮಾಜಾನ್ ಮಸ್ಕಿ

1.
ಪ್ರೀತಿ ಎನ್ನುವುದು ಕೋಮಲ ಸಸಿಯಂತೆ
ಜಾನ್
ಅದಕ್ಕೋಪ್ಪಿದ ನೆಲ ಆರೈಕೆ ದೊರೆತಾಗ ಹೆಮ್ಮರವಾಗಿ ಬೆಳೆದು ಹಣ್ಣು ನೆರಳು ನೀಡುವುದು

2.
ಯಶಸ್ಸನ್ನು ಒಂದೇ ಜಿಗಿತದಲ್ಲಿ ಜಿಗಿದು ಪಡೆಯಲು ಸಾಧ್ಯವೇ
ಜಾನ್?!
ಕಷ್ಟವೇ…ಒಂದೊಂದಾಗಿ ಮೆಟ್ಟಿಲು ಏರುವುದು…

3.
ಕಷ್ಟಗಳು ಬಂದಿವೆ ಹಿಂಸೆ ಕೊಡುತ್ತಿದ್ದಾರೆ ಎಂದು ಕೊರಗುವುದೇ
ಜಾನ್!!
ಬದುಕ್ಕೊಂಡು ಗರಡಿ ಮನೆ ಕಷ್ಟ ಹಿಂಸೆಗಳು ಇದರೊಳಗಿನ ತಾಲೀಮು

4.
ನಂಬಿಕೆ ಮತ್ತು ಆತ್ಮೀಯರಲ್ಲಿ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲೇಬೇಕು
ಜಾನ್
ಹಗುರಾದ ಮನಸ್ಸು ಜೀವನದ ಮುಂದಿನ ಹೆಜ್ಜೆಗಳಿಗೆ ಬೆಳಕು ಚೆಲ್ಲುವುದು


ಮಾಜಾನ್ ಮಸ್ಕಿ

One thought on “ಮಾಜಾನ್ ಮಸ್ಕಿ-ಹನಿಗಳು

Leave a Reply

Back To Top