ಬಂದೆಯಾ ಬಾಳಿಗೆ.ಶಿಶುಗೀತೆ-ಜಯಶ್ರೀ ಭಂಡಾರಿ

ಕಾವ್ಯ ಸಂಗಾತಿ

ಬಂದೆಯಾ ಬಾಳಿಗೆ.ಶಿಶುಗೀತೆ

ಜಯಶ್ರೀ ಭಂಡಾರಿ

ಕರುಣಿಸು ದೇವಾ ಈ ತಾಯ ಮಡಿಲಿಗೆ
ತಪ ಗೈಯುತ್ತಿರುವೆ ಒಡಲ ಮುತ್ತಿಗಾಗಿ
ಅನುದಿನವು ಮನದಲಿ ತಾಳಲಾರೆ ಸಂಕಟ
ಕೇಳೆಯಾ  ದೈವವೇ ಕಾಯುತಿರುವೆ ಹೊತ್ತಿಗಾಗಿ

ಕುಲಾಯಿ ಕುಂಚಿಗೆ ಕಂದನಿಗೆ
ಹೊಲೆದಿಟ್ಟಿರುವೆ 
ಕಾಲಚೀಲ ಸ್ವೇಟರ ಅಕ್ಕರೆಯಲಿ
ಹೆಣೆಯುತಿರುವೆ
ಕರಗಳಂದದಿ ಮರಳಲಿ ನಿದಿರೆಯಲಿರುವೆ
ಬಾ ಕೂಸೆ ಬಾ ನಡುಗದಿರು ಬೆಳಗಿನ ಚಳಿಯಲಿ

ತಾಯಿಯ ಬೆಚ್ಚನೆಯ ಸೆರಗಲ್ಲಿ ಅವಿತು
ಕಣ್ಣರೆಪ್ಪೆಯಲಿ ಜೋಪಾನದಿ ತೂಗುವೆ
ಜೋಗುಳ ಹಾಡುತ ನೋವು ಮರೆಯುವೆ.
ಕಂಡ ಕನಸು ದಿಟವಾಗಿ ನಂದನ ಬಣ್ಣಿಸುವೆ

ಬಂಜೆಯ ಬದುಕಿಗೆ ಉಸಿರ ದೀಪವಾಗಿ
ಸಂಜೆಯ ಹಾಡಿಗೆ ಚಂದ್ರಾಮ ಬಂದಂಗ
ಮಂಜುಳ ನಾದದ ಅಲೆಯಲಿ ಬೆಳದಿಂಗಳಾಗಿ                
ಹಿಂಜಿದ ಅರಳಿಯ ಮೆತ್ತನೆಯ ಹಾಸಿಗೆಗೆ 

ಏನಿದ್ದರೇನು ನೀನಿಲ್ಲದ ಜೊನ್ನಮಳೆ
ತಂಪ ನೀಡೀತೆ.
ಹೂವ ಪರಿಮಳ  ತೇಲಿಬಂದರೂ.ಕಂಪ ತಂದೀತೆ.
ಸಾಗರ ಮಾತೆಯ ವರಪ್ರಸಾದ
ಮರಳ ಹಸ್ತಗಳಲಿ
ಪೃಕೃತಿ ದೇವಿಯೇ ಹರಿಸಿ ಕಂದನ ಕರುಣಿಸಿ‌ 
ಕಂಕುಳಲಿ ಇರಿಸಿ


Leave a Reply

Back To Top