ಜಯಶ್ರೀ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭಂಡಾರಿ

ಒಮ್ಮೊಮ್ಮೆ ಕಣ್ಣಂಚಿನ ಸಂಚಿನಲಿ ಆಗುವುದು ಮದುವೆ.
ಇನ್ನೊಮ್ಮೆ ಹಿರಿಯರ ನಿಶ್ಚಯದಲ್ಲಿ ಸಾಗುವುದು ಮದುವೆ
.
ಬಂಧು ಬಳಗ ಆತ್ಮೀಯರಲ್ಲಿ ಖುಷಿ ತರುವ ಕಲ್ಯಾಣ.
ಸಿಂಧುವಿನ ತೆರೆದಿ ಆಗಮಿಸಿ ಮುದನೀಡುವುದು  ಮದುವೆ.

ವಧು-ವರರು ರೇಷ್ಮೆಯ ದುಕುಲ ಆಭರಣಗಳಂದದಿ.
ಮದು ಮಕ್ಕಳ ರಾಜವೈಭವ ದಿಬ್ಬಣ ತೋರುವುದು ಮದುವೆ.

ತವರನ್ನು ಬಿಟ್ಟು ಅಗಲುವಾಗ ಕಣ್ಣೀರ ಹನಿಗಳ ಧಾರೆ
ತನ್ನವರ ನೆನಪು ಉಮ್ಮಳಿಸಿ ದುಃಖ ತರುವುದು ಮದುವೆ

ಕುವರಿ ಅತ್ತೆ ಮನೆಗೆ ಹೊರಟ ದೃಶ್ಯ ಜಯಳಿಗೆ ಕಷ್ಟವೇ.
ನೇವರಿಸಿ ದಂಪತಿಗೆ ಆಶಿರ್ವದಿಸಿ ವಿದಾಯ ಹೇಳುವುದು ಮದುವೆ.


One thought on “ಜಯಶ್ರೀ ಭಂಡಾರಿ-ಗಜಲ್

Leave a Reply

Back To Top