ಕಾವ್ಯ ಸಂಗಾತಿ
ಹಾಯ್ಕುಗಳು
ಎ. ಹೇಮಗಂಗಾ
- ಸಂಕಷ್ಟಗಳ
ಹಳ್ಳವ ದಾಟುವುದೇ
ಹರಸಾಹಸ - ಚೆಲ್ಲಿದಂತಿದೆ
ಅರಳು , ಮಲ್ಲಿಗೆ ಹೂ
ಎಲೆ ನಡುವೆ - ಸತ್ಯದ ನಖ
ಚುಚ್ಚದೇ ಬಿಡದು ನೀ
ಸುಳ್ಳಾಡಿದರೆ - ಕಾಡುತಿಹುದು
ನಿನ್ನ ಧ್ವನಿ , ನಾನೆಲ್ಲೇ
ಓಡಾಡಿದರೂ - ಯಾರೋ ಇಟ್ಟರು
ಆಗಸಕ್ಕೆ ರಂಗೋಲಿ
ಪ್ರತಿ ರಾತ್ರಿಯೂ - ನಿನ್ನಲ್ಲಿ ಪ್ರೀತಿ
ಹುಟ್ಟಿದ್ದೇ ನನಗೊಂದು
ದೊಡ್ಡ ಸೋಜಿಗ ! - ತೊರೆದು ಹೋದ
ನೀ ಹಾಡದಿರು ನನ್ನ
ಚರಮಗೀತೆ - ಸಹನಾಶೀಲೆ
ಬೆಲೆವೆಣ್ಣು ಕಾಯ್ವಳು
ಕತ್ತಲೆಯಲ್ಲೇ - ನಿನ್ನಧರದ
ಮುತ್ತಿನ ಸವಿ ಸಾಕು
ಮತ್ತೇರಿಸಲು - ನಿನ್ನ ಮುನಿಸೇ
ಬೇವು , ಪ್ರೀತಿಯೇ ಬೆಲ್ಲ
ನಿತ್ಯ ಯುಗಾದಿ - ರಚ್ಚೆ ಹಿಡಿದ
ಮಗು ; ಸಂತೈಸುವಲ್ಲಿ
ತಾಯಿ ಹೈರಾಣ - ಕೆದಕಿದಷ್ಟೂ
ನೆನಪನು ಮನದ
ಗಾಯ ಮಾಗದು
ಎ. ಹೇಮಗಂಗಾ