ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಆಗದು

ಎಂ.ಆರ್. ಅನಸೂಯ

ಕಾಣಿಸದು ಅವಗುಣಗಳು. ‌
ಧೃತರಾಷ್ಪ್ರ ವ್ಯಾಮೋಹದಲಿ
ಹೇಳಲಾಗದು ನಿಷ್ಟುರ ನುಡಿ
ಕರ್ಣನ ಲವಣ ಋಣದಲಿ
ಕೇಳಿಸದು ಕಟು ಸತ್ಯ
ದುರ್ಯೋಧನನ ಹಠದಲಿ
ಅಡ್ಡವಾಗದು ಅಂತಸ್ತು
ಕೃಷ್ಣ ಕುಚೇಲರ ಕೆಳೆತನದಲಿ
ಮಾಯೆಯಾಗದು ಮೋಹ
ಹರಿಶ್ಚಂದ್ರನ ಸತ್ಯ ನಿಷ್ಟೆಯಲಿ
ಮುನ್ನೆಡೆಯದು ಹಿಂಸೆ
ಬುದ್ಧನ ಅಹಿಂಸಾ ಪಥದಲಿ
ಮಣಿಯದು ಸ್ವಾಭಿಮಾನ
ಅಂಬೇಡ್ಕರ್ ರ ಸಮಾನತೆಯಲಿ
ಮಾನ್ಯವಾಗದು ಮತಾಂಧತೆ
ಕುವೆಂಪುರವರ ಮನುಜ ಮತದಲಿ


About The Author

Leave a Reply

You cannot copy content of this page

Scroll to Top