ಕಾವ್ಯ ಸಂಗಾತಿ
ಯುದ್ದ
ನಿರ್ಮಲ ಬಟ್ಟಲ
ಮಸಣದ ಮಾರಿ
ಹೊಕ್ಕಳು ಊರಕೇರಿ
ನೆತ್ತರದ ಆಸೆಯಲಿ
ಹಸಿಮಾಂಸವ ಹಂಬಲಿಸಿ
ನೀಗಲಿಲ್ಲವಳ ಹಸಿವು ಬಾಯಾರಿಕೆ
ದಶಕಗಳ ಹಸಿವಿಗಿದು ಅರೆ ಮಜ್ಜಿಗೆ
ಹೆಣದ ರಾಶಿಯ ಮೇಲೆ
ಅಟ್ಟಹಾಸದ ಕನಸು ಕಂಡು
ಹೊಕ್ಕಳು ರಾಜನೆದೆಯ
ಗಡಿ ತಗಾದೆಗೆ ಕಿಡಿಬೆಂಕಿ
ಒಳಗೊಳಗೆ ನಿಗಿನಿಗಿಸಿತು
ಅಹಮ್ಮಿನ ಕಿಚ್ಚು
ರೊಚ್ಚಿಗೆದ್ದ ದುರಭಿಮಾನದ ಕೆಚ್ಚು
ಸಡಿಲಿಸದ ಪಟ್ಟು
ಮೊಳಗಿತು ರಣಿ ದುಂದುಭಿ
ಭೀಕರ ಯುದ್ಧವಿಗ ಹೊಸಸುದ್ದಿ
ಲೆಕ್ಕತಪ್ಪಿದ ಸಾವು ನೋವು
ಹೇಸಿಗೆ ಪಡುವಷ್ಟು ಅತ್ಯಾಚಾರ
ವೈಮಾನಿಕ ದಾಳಿ
ಪ್ರಗತಿಪತ ಈಗ ಸುಡುಗಾಡು
ಹಿಂದೆ ಕೈಕೊಟ್ಟಿತು ಸಹಾಯಹಸ್ತ
ಮಾನವೀಯತೆ ಸಮಾಧಿ
ಗೆದ್ದು ಮೆರೆವ ಸಾಮ್ರಾಜ್ಯ
ಮಾನವರೆಲ್ಲ ದಾನವರಾಗಿದ್ದಾರಿಗ
ಮಸಣದ ಮಾರಿಗಿಗ
ತಣಿದ ಮೈಮನ
ಮೈಯಡರಿದ ಸುಸ್ತು
ಮಲಗುವ ಮುನ್ನ
ಮನಮನೆಯೊಳಗೆ ಕಿಡಿ
ಹೊತ್ತಿಸುವ ಹುನ್ನಾರ
ನೆತ್ತರದ ಮಜ್ಯನದಿಮಿಂದೆದ್ದು ಸುತ್ತಲೂ ಕೇಳುವ
ಚಿತ್ಕಾರದ ಲಾಲಿಯಲಿ
ಮಲಗು ಬೇಕೆನ್ನುವ ಅವಳ
ತೊಟ್ಟಿಲು ತೂಗುತಿದೆ
ಬಸಿರಲಿಕಮರಿದ ಬ್ರೂಣ….
ತುಂಬಾ ಚೆನ್ನಾಗಿದೆ ನಿರ್ಮಲಾ….
ತುಂಬಾ ಚೆನ್ನಾಗಿದೆ ರಿ
ಮೇಡಮ್
ಸೂಪರ್… ಕವನ ಮೇಡಂ