ಕಾವ್ಯ ಸಂಗಾತಿ
ನೆನಪಾಗಿ ನೀ ಬರುವೆ
ಪ್ರಭುರಾಜ ಅರಣಕಲ್
ನೀ ನಗಲಿಹೋದರು , ನನ್ನೆ ದೆಯಾಳದಲಿರುವೆ
ಹೊತ್ತುಗೊತ್ತಿಲ್ಲದೆ – ನೆನಪಾಗಿ ನೀ ಬರುವೆ
ಮುಂಜಾನೆಯಹಕ್ಕಿಕೊರಳಗಾನವಾಗಿಬರುವೆ
ಬತ್ತಿರುವ ಹೊಳೆಯ ತುಂಬು ನೆರೆಯಾಗಿಬರುವೆ
ಮೊಗ್ಗುಗಳರಳುವ ಕಾಲದ ಹಿಗ್ಗಿನಂತೆ ಬರುವೆ
ಹೊತ್ತುಗೊತ್ತಿಲ್ಲದೆ – ನೆನಪಾಗಿ ನೀ ಬರುವೆ ….
ಬಿಳಿಮೋಡದಿ,ನೀನೆ ಭಾವಚಿತ್ರವಾಗಿಕಾಣಿಸುವೆ
ಕಡಲೊಡಲ ನಡುವಿಂದ ಹಡಗಿನಲ್ಲಿ ಬರುವೆ
ಮುಂಬೆಳಗುಹೊಂಬಣ್ಣದಮಡಿಯುಟ್ಟುಬರುವೆ
ಹೊತ್ತು ಗೊತ್ತಿಲ್ಲದೆ – ನೆನಪಾಗಿ ನೀ ಬರುವೆ
ಹಸಿರುಟ್ಟ ಹೊಲದಲ್ಲಿ ನವಿಲಾಗಿ ಕುಣಿಯುವೆ
ಬೆಳೆದುನಿಂತ ಪೈರಿನಲ್ಲಿ ತೆನೆಯಾಗಿ ತೂಗುವೆ
ಬೆಳದಿಂಗಳ ರಾತ್ರಿ ಹೊಳೆವ ಬೆಳಕಾಗಿ ಬರುವೆ
ಹೊತ್ತುಗೊತ್ತಿಲ್ಲದೆ – ನೆನಪಾಗಿ ನೀ ಬರುವೆ ….
ಹೌದು ಎಂದೂ
ಅಳಿಯದ ನೆನಪು;
ಹಾಕುತ್ತ ಮೆಲುಕು
ಸಾಗಬೇಕು ಬದುಕು.
ನಿಮ್ಮ ಅವಲೋಕನಕ್ಕೆ ಧನ್ಯವಾದಗಳು, ಕುಕ್ಕುಂದಾ ಅವವರೇ.
–ಪ್ರಭುರಾಜ ಅರಣಕಲ್
– ರಾಜಶೇಖರ ಕುಕ್ಕುಂದಾ
ಬರುವಿಕೆಯನ್ನು ಪರಿ ಪರಿಯಾಗಿ ವರ್ಣಿಸಿರುವುದು ಹೃದಯ ಸ್ಪರ್ಶಿಯಾಗಿದೆ,
ನೆನಪಿನ ದೋಣಿ ಮನಸಿನ ಸಾಗರದಿ ತೇಲುತ್ತಲೆ ಇರುತ್ತದೆ ಅಲೆಯ ಏರಿಳಿತಕ್ಕೆ ಹೊಂದಿ ಸಾಗುತ್ತಲೆ ಇರುತ್ತದೆ ಸದಾಗಾಲ.