ಬರೆದಿಟ್ಟ ಕವಿತೆಗಳು-ಸುಲಭಾ ಜೋಶಿ ಹಾವನೂರ ಕವಿತೆ

ಕಾವ್ಯ ಸಂಗಾತಿ

ಬರೆದಿಟ್ಟ ಕವಿತೆಗಳು

ಸುಲಭಾ ಜೋಶಿ ಹಾವನೂರ

ಬರೆದಿಟ್ಟ ಕವಿತೆಗಳು.
ಅಲ್ಲಲ್ಲಿ ಎಲ್ಲೆಲ್ಲೋ ಚೆಲ್ಲಾಪಿಲ್ಲಿ.
ಹುಡುಕಲ್ಲೆಲ್ಲಿ ಬಲು ಕಸಿವಿಸಿ.
ಭಾವಾಂತರಂಗದ ಕಲರವದ
ಅಲೆಗಳು ತಟ್ಟಿದ್ದೆ ಸಾಕು
ಬರೆದಿಟ್ಟ ಕವಿತೆಗಳು ಮತ್ತೆ ಬೇರಿಳಿದು ಚಿಗುರೂಡೆದು
ಟಿಸಿಲೂಡೆದು
ಕೆಲವು ಮೂಗ್ಗಾದವು
ಕೆಲವು ಹೂವಾದವು
ಕೆಲವು ಹಣ್ಣಾದವು.
ಬರೆದಿಟ್ಟ ಒಂದು ಕವಿತೆಯಂತು
ಪಕ್ಷಿಯಾಗಿ ,ನೋಡು ನೀನೆ ಬರೆದದ್ದು
ಕಲಕಲಕಿಸುತ್ತಾ ನನ್ನ ಕವಿತೆಯನ್ನೇ
ನನ್ನೆದುರು ಒದಿ ತೋರಿಸಿತು
ಮತ್ತೆ ಹಾರಿತು ಪಕ್ಷಿ ನಕ್ಷತ್ರದೆಡೆಗೆ
ಹೆಕ್ಕಿ ತರಲು ಅಕ್ಷರಗಳನ್ನು
ಇಕೋ,ಉಡಿ ತುಂಬ ಹಿಡಿ ಅಕ್ಷರಗಳ.
ಭಾವ ಸ್ವಚ್ಛವಿದ್ದರೆ,
ಇಟ್ಟ ಶಬ್ದಗಳ ಹಿಂದೆ ಅರ್ಥ
ಬರುತ್ತವೆ ತಾವೇ ಓಡಿ ಅದು ಶಬ್ದಾರ್ಥ ಜೋಡಿ
ಬರಿದಾಗದೆ ಬರೆಯುತ್ತ ಬರೆಯುತ್ತ
ಆವಾಗ,ಬರಿ ಬದುಕಲ್ಲೋ ಇದು
ಅರಿವಿನ ಅಂತರಾತ್ಮ.
ಪ್ರಸನ್ನತೆಯ ರಸಪಾಕ.

ತಿಳುವಳಿಕೆಯ ತಿಳಿಗೂಳದ
ನಿರಭ್ರ ಆಕಾಶದ ಪ್ರತಿಬಿಂಬ.


Leave a Reply

Back To Top