ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಗಜಲ್
(ಮೇಲಿನ ಕಾಷ್ಠ ಶಿಲ್ಪ ನೋಡಿ ಹೊಳೆದದ್ದು)
ಎಂಥ ಸುಂದರ ರೂಪ ಧರಿಸಿಹೆ ಎಲೈ ಕಾಷ್ಠವೇ
ನಿನಗೆ ಜೀವ ತುಂಬವ ಕೆಲಸವು ಬಲು ಶ್ರೇಷ್ಠವೇ
ಬಾರದಿರು ಎದುರಿಗೆ ಜೀವಂತ ಎಂದಿಗೂ ನನ್ನ ಮುಂದೆ
ನಿಜ ಪ್ರೀತಿ ಪಾಲಕ ನನ್ನಂತ ಜೀವಿಗೆ ತುಸು ಕಷ್ಟವೇ
ಬಲಹೀನತೆಗೆ ಒಡ್ಡದಿರು ಯಾರೇ ನಿಜ ಪ್ರೇಮಿಯನು
ಇರಲಿ ಪ್ರೇಮ ಅನುರಾಗಗಳು ಅವರಿಗೆ ಜೇಷ್ಠವೇ
ಸಂಯಮ ಕಳೆದು ನಿನ್ನ ಮೈ ಸೊಂಕಿದರೂ ತಪ್ಪೇಸರಿ
ಇಲ್ಲವಾಗುವುದು ಬೆಲೆ ಪ್ರೇಯಸಿ ಎಡೆಯ ಇಷ್ಟವೇ
ಕೃಷ್ಣಾ! ಸಾಕಷ್ಟು ನಿಗ್ರಹ ಶಕ್ತಿಯ ಒಸಗು ನನಗೆ
ವಿಶ್ವಾಮಿತ್ರರಂತಾಗೀತು ನನ್ನೆಲ್ಲಾ ಯಶವು ಭ್ರಷ್ಟವೇ
ಬಾಗೇಪಲ್ಲಿ