ಕಾವ್ಯ ಸಂಗಾತಿ
ಗಜಲ್
ನಾಗರತ್ನ ಅಶೋಕ ಭಾವಿಕಟ್ಟಿ
ಸುಳಿಯುತಿದೆ ಹೊಸತೊಂದು ಗಾಳಿ
ಸ್ವೀಕರಿಸಿ ಅನುಕರಿಸು
ಸುರಿಸುತಿದೆ ಒಲವಿನ ಇಬ್ಬನಿ
ಕಾಪಿಟ್ಟು ಕಾವಲಿರಿಸು
ಕವಿತೆಯ ಪ್ರತಿ ಶಬ್ಧಗಳಲ್ಲಿ
ಅವಿತಿರುವೆಯೇಕೆ
ಸಾಲುಸಾಲಲ್ಲೂ ಪ್ರವೇಶಿಸಿ ಓದಿಸು
ಕಾಣದಂತೆ ತಿಳಿಯದಂತೆ ಅದನಿರಿಸು
ಭಾವ ಗಂಗೆಯಂತೆ ಹರಿದು ಬಾ
ಕಾವ್ಯ ಕಟ್ಟೆಯನ್ನು ಕಟ್ಟುತ್ತಿರುವೆ
ಪ್ರತಿ ಮುಂಗಾರಿಗು ಹೊಸ ನೀರು
ಪ್ರೇಮ ಜಲಧಾರೆ ಉಕ್ಕಿಹರಿಸು
ಅರಿಯದೆ ಬಯಸಿ ಬಸವಳಿಯಬೇಡ
ಪ್ರಜ್ಞೆಯೊಂದಿಗೆ ಮುನ್ನಡಿ ಇಡುತಿರು
ತಗ್ಗು ದಿನ್ನೆಗಳಲ್ಲೂ ಎದ್ದು ನಿಲ್ಲು
ಸಲಹೆ ಕೇಳಿ ಸ್ವೀಕರಿಸು
ನವೊಲ್ಲಾಸದ ನವನವೀನತೆ
ರತುನಳ ಬಾಳ ಭಾವಗೀತೆಯಾಗಿ
ರಾಗಗಳ ಹದವರಿತು ವಾದ್ಯವಾಗಿಸು
ಮನದ ವೇನೆಯನೇರಿ ವಿಹರಿಸು