ಕಾವ್ಯಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಕಾವಿ ವೇಷದಾರಿಗಳಿದ್ದಾರೆ ಮಠದ ಅಂಗಳದಲ್ಲಿ
ತತ್ವದ ವ್ಯಾಪಾರಿಗಳಿದ್ದಾರೆ ಮಠದ ಅಂಗಳದಲ್ಲಿ
ಬೆಳಕ ಹನಿವ ದೀಪ ಸುಡುವ ಕಿಚ್ಚಾಯಿತೇ..?
ಕತ್ತಲ ಕೋಣೆಯ ಗಿರಾಕಿಗಳಿದ್ದಾರೆ ಮಠದ ಅಂಗಳದಲ್ಲಿ
ಲೋಕದ ಚಿಂತೆಯ ಗದ್ದುಗೆಗೆ ನಾಕದ ತಲಬು ಹೆಚ್ಚಾಯಿತೇ….?
ಹಗಲಲಿ ಮುಖವಾಡದ ವ್ಯಭಿಚಾರಿಗಳಿದ್ದಾರೆ ಮಠದ ಅಂಗಳದಲ್ಲಿ
ಊಸರವಳ್ಳಿ ಬಣ್ಣ ಬದಲಿಸದಿರುವುದೇ..? ಗೆಳೆಯ
ಗದ್ದುಗೆ ದಲ್ಲಾಳಿಗಳಿದ್ದಾರೆ ಮಠದ ಅಂಗಳದಲ್ಲಿ
ದೇವಾ ನಿನ್ನ ಹೆಸರಲ್ಲಿ ನಿನ್ನೇ ಮಾರುವುದುಂಟು ಗೊತ್ತೇ..?
ನೆತ್ತರು ಮಾರುವ ಸೈತಾನರಿದ್ದಾರೆ ಮಠದ ಅಂಗಳದಲ್ಲಿ
—————————-