ಕಾವ್ಯ ಸಂಗಾತಿ
ಮನಸ್ಸೆಂಬ ಮರ್ಕಟ
ಪ್ರೊ ರಾಜನಂದಾ ಘಾರ್ಗಿ
ಮನಸ್ಸೆಂಬ ಮಹಾ ಮರ್ಕಟ
ಜಿಗಿಯುತಿದೆ ಕೊಂಬೆಗಳರಸಿ
ಅರಿಷಡ್ವರ್ಗಗಳ ಕಾನನದಲ್ಲಿ
ಬಯಕೆಗಳ ಜಾಲ ತಾಣದಲಿ
ಸಂಭಂಧಗಳ ಸಂಕೀರ್ಣತೆಯಲಿ
ಸಿಲುಕುತ್ತ ತೊಳಲಾಡುತಿದೆ
ಭವ ಬಂಧನದ ಕ್ಲಿಷ್ಟತೆಯಲ್ಲಿ
ಹೊರಳುತ್ತ ಬಳಲಾಡುತ್ತಿದೆ
ಅಷ್ಟೈಶ್ವರ್ಯದ ಮದವೇರಿ
ಜಗ ಕೇಳುವಂತೆ ಹೂಂಕರಿಸುತ್ತಿದೆ
ಪ್ರಸಿದ್ದಿಯ ಮದಿರೆಯ ಕುಡಿದು
ಮತ್ತಿನಲಿ ಹೊರಳಾಡುತಿದೆ
ನಶ್ವರ ಬದುಕಿನ ಭಯವಿಲ್ಲದೆ
ಚಿರಾಯುವೆಂಬಂತೆ ಮೆರೆಯುತಿದೆ
ಹುಡುಕ ಬೇಕಿದೆ ಆ ಮನಸ್ಸನ್ನು
ತೊಡಿಸ ಬೇಕಿದೆ ಭಾವ ಬೇಡಿಯನ್ನು
ತೊರಬೇಕಿದೆ ಅನುಭಾವದ ಕನ್ನಡಿಯನ್ನು
ತಿಳಿಸಬೇಕಿದೆ ಜೀವನದ ನಿಜ ಅರ್ಥವನ್ನು
ಬುದ್ದ ಬಸವರು ಸಾರಿದ ತತ್ವಗಳಲ್ಲಿ
ಅಡಗಿದ ಸಾರ್ಥಕತೆಯ ದಾರಿಯನ್ನು
ಪ್ರೊ ರಾಜನಂದಾ ಘಾರ್ಗಿ
ಮನಸು ಮರ್ಕಟ ಕಣ್ರಿ..
ಈ ಮನಸು ಒಂಥರಾ ರಿ…
ಥೇಟ್ ಇದ್ಹಂಗೆ ಕೋತಿ ಮರಿ..
ಹೇಳಿದ್ದು ಕೇಳಲ್ಲ ನಾ ಹೇಳೋದ್ ಕೇಳ್ರಿ….
ಅದಕ್ಕೆ ಬೇಕಿದ್ದಂಗೆ
ಇರ್ಲಿ ಬಿಟ್ಟು ಬಿಡ್ರಿ…
ಬಾಲವೊಂದಿಲ್ಲ ಈ ಮನಕ್ಕೆ ರೀ..
ಮೊದಲೇ ಹೇಳಿದ್ನಲ್ವಾ ರೀ
ಈ ಮನಸು ಸೇಮ್ ಕೋತಿ ಮರಿ ರಿ…
Tushaar✍ 9739303226
ನಿಜ
ಪ್ರತಿಕ್ರಿಯೆಗೆ ಧನ್ಯವಾದಗಳು