ತನಗ ವಿಶೇಷ ನಾಗರತ್ನ ಎಂ ಜಿ

ಕಾವ್ಯ ಸಂಗಾತಿ

ನಾಗರತ್ನ ಎಂ ಜಿ

ತನಗ ವಿಶೇಷ

೧.
ವರುಷ ನಲವತ್ತು
ಒಡೆದು ಈ ಹೃದಯ
ಮರೆಯದಾದೆ ಇನ್ನೂ
ಆ ಮೊದಲ ಪ್ರೇಮವ
……………………

ಕಾದ ಭೂಮಿಗೆ ಉರಿ
ತಂಪಾಗಿಸಲಿ ವರ್ಷ
ಇಳೆಗೆ ಇಳಿಯಲಿ
ಭೂರಮೆ ನಲಿಯಲಿ


ನೆರಳೇ ಬರುವೆ ನೀ
ಇದ್ದಲ್ಲೆಲ್ಲ ಬೆಳಕು
ಜೊತೆ ಬೇಕು ಅಂದಾಗ
ದೂರಾದೆ ಕತ್ತಲಲಿ


ಸೂರ್ಯನೇಕೆ ಸುರಿವ
ಕರುಣೆಯೇ ಇಲ್ಲದ
ಕೆಂಡದಂತಹ ಉರಿ
ಮಳೆ ನೀ ಬೇಗ ಸುರಿ


ನಡೆಯಲಿ ತನಗ
ಉತ್ಸವದ ಕರಗ
ಏರಲಿ ಕವಿಗಳ
ಪ್ರತಿಭೆಯ ಬಾವುಟ


ಬಚ್ಚಿಟ್ಟೆ ಬಸಿರಲ್ಲಿ
ಉಸಿರೇ ಒಡಲಲ್ಲಿ
ಪಣಕ್ಕಿಟ್ಟೆ ಜೀವವ
ನೀಡಲು ಈ ಜೀವನ


ಮಾಡು ನೀ ಕಾಯಕವ
ಬಿಟ್ಟೆಲ್ಲಾ ಯೋಚನೆಯ
ನೀಡುವನು ಫಲವ
ನಿಜದಿ ಆ ಕೇಶವ


ವಾಹನಗಳ ಸುಟ್ಟು
ಮನೆಗೆ ಬೆಂಕಿ ಹಚ್ಚಿ
ಮೆರೆಸಿ ಜಾತಿಗಳ
ಸಾಧಿಸಿದಿರಿ ಏನು…?


ಗೌರಿ ಗಣಪ ಹಬ್ಬ
ಮಾಡುತ್ತಿದ್ದೆ ನಾ ಉಬ್ಬಿ
ಸೂತಕವೊಂದು ಬಂತು
ಹಬ್ಬ ಮಾಡದಂತಾಯ್ತು

೧0
ಹೇಗೆ ಮಾಡಲಿ ಹಬ್ಬ
ಹೇಳು ನೀನು ಗಣಪ
ನವರಾತ್ರಿಯಲ್ಲಿ ನೀ
ಬರುವೆಯಾ ಬೆನಕ..?

೧೧
ಎಲ್ಲರೂ ಬರೀತಾರು
ಚೆಂದದ ತನಗವ
ಏನೆಂದು ತಿಳೀವಲ್ದು
ನನಗೂ ತಿಳಿಸ್ರಪ್ಪ

೧೨
ಏರುತ್ತಿದೆ ಉತ್ಸಾಹ
ಬರೆಯಲು ತನಗ
ಉತ್ಸವಕ್ಕಾಗಿ ತುಸು
ಉಳಿಸಿರಿ ಬರಹ

೧೩
ಎಲ್ಲ ಬೇಕು ತನಗ
ಎನ್ನುವೆ ಓ ಮನುಜ
ಹಾರಲು ಪ್ರಾಣ ಪಕ್ಷಿ
ಒಯ್ಯುವೆಯ ನೀ ಸಂಗ

೧೪
ಪ್ರೀತಿಸಬೇಡ ನೀನು
ಪ್ರೀತಿಸಲಾರೆ ನಾನು
ನಿನ್ನ ನೆನಪೇ ಸಾಕು
ದೂಡಲು ಈ ಬದುಕು

೧೫
ಭಾವನೆ ಹುಡುಕಿದೆ
ನನ್ನ ಪದಗಳಲಿ
ಕಳೆದೇ ಹೋದೆನಲ್ಲ
ಈ ನಿನ್ನ ಸ್ನೇಹದಲಿ


One thought on “ತನಗ ವಿಶೇಷ ನಾಗರತ್ನ ಎಂ ಜಿ

Leave a Reply

Back To Top