ಡಾ.ಭೇರ್ಯ ರಾಮಕುಮಾರ್ ಕಿರುಕವಿತೆಗಳು

ಕಾವ್ಯ ಸಂಗಾತಿ

ಡಾ.ಭೇರ್ಯ ರಾಮಕುಮಾರ್ ಕಿರುಕವಿತೆಗಳು

ಕಿವಿಮಾತು

ಕಷ್ಟಗಳು ಬಂದವೆಂದು ಶೋಕಿಸಬೇಡ,ಪುಟವಿಟ್ಟ ಚಿನ್ನಕ್ಕಲ್ಲವೇ ಬೆಲೆ,
ಹೀಚುಕಾಯಿಗಳಿಗೆ ಎಲ್ಲಯ ರುಚಿ ?
ಪಕ್ವಗೊಂಡ ಹಣ್ಣಿನ ರುಚಿ ಅಮೃತ ಸಮಾನ,
ಕಷ್ಟಗಳ ಅಗ್ನಿ ಪರೀಕ್ಷೆಯಲಿ ನೊದು, ಬೆಂದು ಪಕ್ವವಾಗಿಬಿಡು,
ನಿನ್ನ ಬಾಳು ಆಗಲಿ ಅಪೂರ್ವ ಅನುಭವಗಳ ಗಣಿ..

ನಂಬಿಕೆ

ನಂಬಿಕೆಯ ಮೇಲೇಯೇ
ಈ ಜಗದ ಉಳಿವು..
ಒಳ್ಳೆಯ ನಾಳೆಗಳ ನಂಬಿಕೆಯೇ
ಇಂದಿನ ಮುಗ್ದ ಮಗುವಿನ ಮುಗುಳ್ನಗೆ,
ನಾಳೆ ಎಲ್ಲ ಕಳೆದು ಬೆಳಕು ಮೂಡುವ ನಂಬಿಕೆಯೇ
ಇಂದಿನ ಕತ್ತಲ ಪ್ರಪಂಚದಲಿ
ಬದುಕಲು ಮೂಲ ಚೇತನ..

ಮಾತು- ಮೌನ

ಭಾವನೆಗಳು ಅರ್ಥವಾಗುವವರ ಬಳಿ
ಮನಬಿಚ್ಚಿ, ಹೃದಯತುಂಬಿ ಮಾತನಾಡಬೇಕು,
ಹಣ, ಆಸ್ತಿ, ಅಂತಸ್ತುಗಳ ಕೊಬ್ಬಿನಲಿ
ಏನನ್ನೂ ಕಾಣದವರ ಮುಂದೆ,
ಕೇಳದವರ ಮುಂದೆ
ಎಂದೆಂದೂ ಮೌನವಾಗಿರಬೇಕು,
ಅಲ್ಲಿ ನಮ್ಮ ಸಾಧನೆಗಳು ಮಾತನಾಡಬೇಕು..


ಡಾ.ಭೇರ್ಯ ರಾಮಕುಮಾರ್

4 thoughts on “ಡಾ.ಭೇರ್ಯ ರಾಮಕುಮಾರ್ ಕಿರುಕವಿತೆಗಳು

Leave a Reply

Back To Top