ಬದುಕಿಬಿಡಿ,ಮಾಳಿಂಗ ಹಾದಿಮನಿ ಗಂಗನಾಳರವರ ಕವಿತೆ

ಕಾವ್ಯ ಸಂಗಾತಿ

ಬದುಕಿಬಿಡಿ

ಮಾಳಿಂಗ ಹಾದಿಮನಿ

ತುಂಬಾ ಸಹಿಸಿಕೊಳ್ಳುವ ಗುಣ ಬೇಡ
ಸಾಯಿಸುವಷ್ಟು ಹೀನ ಮನಸ್ಸಿನವರು ಜಗದಲ್ಲಿದ್ದಾರೆ

ಎಲ್ಲರೂ ಸ್ವಾರ್ಥಿಗಳೇ
ನೋಡಿ ಒಂದಿಲ್ಲೊಂದು ಬೇಡಿಕೆಗೆ
ಮಂದಿರಗಳ ಮುಂದೆ ಸಾಲು ನಿಂತವರು ಇವರು

ಭಯ ಬೇಡವೇ ಬೇಡ
ಇದ್ದವರು ಇಲ್ಲದವರು ಸೋತವರು ಗೆದ್ದವರು
ಬಿದ್ದವರು ಎದ್ದವರು
ಎಲ್ಲರೂ ಒಂದುದಿನ
ಹೋಗುವವರೇ

ಬದುಕಿ ಬಿಡಿ ಚಿಟ್ಟೆಯ ಹಾಗೇ ಹಾರಾಡುತ್ತಾ
ನವಿಲಿನ ಹಾಗೇ ಕುಣಿದಾಡುತ್ತಾ
ಕ್ಷಣ ಕ್ಷಣ ನಲಿದಾಡುತ್ತ
ಇದ್ದಲೆಲ್ಲ ನೆಮ್ಮದಿಯ ಹುಡುಕುತ್ತಾ

ಮರೆತು ಬಿಡಿ ಸ್ನೇಹ ಪ್ರೀತಿ ಈಗೀಗ
ವ್ಯಾಪಾರದ ಸರಕುಗಳಾಗಿವೆ
ಸಂಬಂಧಗಳು ಮಾರಾಟದ ವಸ್ತುಗಳಾಗಿವೆ
ಇದ್ದವ ಈಗ ಧಣಿ ಅಣ್ಣ ಸಾಹುಕಾರ

                -----------------------

Leave a Reply

Back To Top