ಕಾವ್ಯ ಸಂಗಾತಿ
ಕಾಫಿಯಾನ ಗಜಲ್
ಮಾಜಾನ್ ಮಸ್ಕಿ
ಕಾರ್ಗತ್ತಲೆ ಆಟಕ್ಕೆ ಮುಂಜಾವು ವಿದಾಯ ಹೇಳಿತು
ಹೃದಯದ ಶಾಯಿಯಲ್ಲಿ ತಂತಾನೆ ಕವಿತೆ ಬರೆಸಿತು
ನಿನ್ನ ಸಾಮ್ರಾಜ್ಯ ತೊರೆದು ಹಗುರತೆಯಲ್ಲಿ ಸಾಗಿದೆ
ತಾಳ್ಮೆಯು ಇನ್ನಿಲ್ಲದೆ ನಾಚಿಕೆಯಿಂದ ಶಪಿಸಿತು
ನಿನ್ನ ಪ್ರೀತಿಯ ವಿಷ ದಕ್ಕಿಸಿಕೊಂಡಾಯಿತು ಇನಿಯ
ಮನದ ಮಂಥನದಲ್ಲಿ ಅಮೃತ ಸೇವಿಸಿ ಜೀವಿಸಿತು
ನಿನ್ನ ಹೆಸರ ಜಪಮಾಲೆ ಹರಿದು ನೆನಪು ಛಿದ್ರಿಸಿವೆ
ಅಳಿದುಳಿದ ನೆನಪುಗಳು ಶೂಲವಾಗಿ ಕಾಡಿಸಿತು
ನಿನ್ನೊಡಲಲ್ಲಿ ಬಿಗಿದ ಬೇರಾಗುವೆ ಎಂದುಕೊಂಡಿದ್ದೆ
“ಮಾಜಾ” ಆಸರೆಯಿರದೆ ಹಕ್ಕಿಯಂತೆ ಹಾರುವುದ ಕಲಿಸಿತು