ಹಾಯ್ಕುಗಳು,ಸಿದ್ದಲಿಂಗಪ್ಪ ಬೀಳಗಿ

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ಹಾಯ್ಕುಗಳು


ಉರಿದು ಬಿದ್ದ
ಸಿಗರೇಟಿನ ಬೂದಿ
ಭಗ್ನಾವಶೇಷ


ಮುತ್ತಿನ ಮಳೆ
ಬಿತ್ತನೆಗೆ; ಮೈಮನ
ತುಂಬ ಪುಳಕ


ನರಕವದು
ಪ್ರಜ್ಞಾಪರಾಧ; ಸ್ವರ್ಗ
ನಮ್ಮ ಕೈಯಲಿ


ಭೂತಕಾಲದ
ಚಿಂತೆಯಲಿ; ಭವಿಷ್ಯ
ಕಾಲವಾಯಿತು


ಎದೆಯಾಳಕೆ
ಪ್ರೀತಿ ಬೀಜವ ಬಿತ್ತು
ಪ್ರೇಮ ಫಸಲು


ಹರೆಯದಲಿ
ಸ್ಪರ್ಶವೂ ಚೇತೋಹಾರಿ
ಮುಪ್ಪಲಿ ಮೌನ


ಅವಳಿಗವ
ಅವನಿಗವಳು; ಈ
ಸಂಸಾರ ಸಾರ


ಮೊಗ್ಗು ಅರಳಿ
ತಂತಾನೆ ಕುಣಿಯಿತು
ದುಂಬಿಗುಲ್ಲಾಸ


ಪ್ರೀತಿ ಹಂಚಿದ
ದ್ವಿಗುಣ ಆಯ್ತು; ಮುಚ್ಚಿ
ಇಟ್ಟ ಬಾಡಿತು


ಶಬ್ದದಾಚೆಯ
ನಿಶ್ಯಬ್ದ ಲೋಕ; ತುಟಿ
ಮಿಲನ ಕ್ಷಣ


2 thoughts on “ಹಾಯ್ಕುಗಳು,ಸಿದ್ದಲಿಂಗಪ್ಪ ಬೀಳಗಿ

Leave a Reply

Back To Top