ಸಿಟ್ಯಾಕೊ ನನ ರಾಯ,ಪ್ರೊ ರಾಜನಂದಾ ಘಾರ್ಗಿ ಕವಿತೆ

ಕಾವ್ಯ ಸಂಗಾತಿ

ಸಿಟ್ಯಾಕೊ ನನ ರಾಯ

ಪ್ರೊ ರಾಜನಂದಾ ಘಾರ್ಗಿ

ಸಿಟ್ಟಯಾಕೊ ಸಿಡಕ್ಯಾಕೊ ನಲ್ಲ
ಹತ್ತಿರ ಬಂದರ ಸಿಹಿ ಬೆಲ್ಲ ಕೊಡತಿನಿ
ನೀ ನನ್ನ ಚಂದ್ರ ನೀ ನನ್ನ ಇಂದ್ರ
ನೀ ಹತ್ರ ಬಂದ್ರ ಕರಗಿ ನೀರಾಗತೆನಿ

ಸಣ್ಣನ ಶ್ಯಾವಿಗಿ ಬಸದೇನಿ ಬಾ ಬೇಗ
ಸಿಹಿಯಾದ ಬೆಲ್ಲಾ ಹಾಕಿ ತಿರವೇನಿ
ತುಂಬಿದ ಗಂಗಾಳ ಸುಡತೇತಿ ನನ ರಾಯ
ಬಟ್ಟಲ ತುಂಬ ತುಪ್ಪ ಸುರದೇನಿ

ಹೊಸ ಮಡಿ ಉಟ್ಟು ನಿಂತೇನಿ
ಮಲ್ಲಿಗೆ ತೆಲೆ ತುಂಬ ಮುಡಿದೇನಿ
ಕಣ್ಣಾಗ ದೀಪ ಹಚ್ಚಿಟ್ಟೆನಿ ನನ ವೀರ
ಮನದಾಗ ಹೊನ್ನ ಜೋಕಾಲಿ ಕಟ್ಟೇನಿ

ಬಂದರೆ ಬಾರೊ ನನ್ನ ಗೆದ್ದ ಶೂರ
ನಿನಗಾಗಿ ಬಾಗಲಕ ಬಂದ ನಿಂತೇನಿ
ನೀ ಬಂದ ನಿಂತರ ನನ ಮುಂದ
ಶಿವಗ ಸಾವಿರ ಉರಳ ಹರಕಿ ಹೊತ್ತೇನಿ


3 thoughts on “ಸಿಟ್ಯಾಕೊ ನನ ರಾಯ,ಪ್ರೊ ರಾಜನಂದಾ ಘಾರ್ಗಿ ಕವಿತೆ

  1. ಒಬ್ಬ ಹೆಣ್ಣಿನ ಮನದಾಳದ ಪ್ರೀತಿಯನ್ನು ಜಾನಪದ ಶೈಲಿಯಲ್ಲಿ ನಿಮ್ಮ ಕವನದ ಮೂಲಕ ರಸವತ್ತಾಗಿ ಉಣಬಡಿಸಿದ್ದೀರಿ….. ಮನಸೆಳೆಯಿತು.

  2. ಕವಿತೆಯ ತಲೆಬರಹವೆ ಆಕರ್ಷಕ ವಾಗಿತ್ತು.
    ಇಲ್ಲಿ ಹೆಣ್ಣಿನ ಭಾವನೆಗಳು ದಾಂಪತ್ಯದ ಸರಳವಾಗಿ ಸುಂದರವಾಗಿ ಅರಳಿವೆ.

Leave a Reply

Back To Top