ಕಾವ್ಯ ಸಂಗಾತಿ
ನಾನು ಹೊರಟ ದಿಕ್ಕು
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ನಾನು ಸಾಯುವಾಗ
ನಿನಗೊಂದು
ಹೂವು ಕೊಟ್ಟಿದ್ದೆ
ಹಸಿಯಾಗಿದೆಯಾ!
ನನ್ನ ಹೆಜ್ಜೆಗಳು ಮಾಸಿದ ಮೇಲೆ ಎಸೆದು ಹೋದೆಯಾ?
ತುಂಬಾ ದಿನಗಳಿಂದ
ಕಣ್ಣ- ತುಂಬಿ ಮುತ್ತನಿಕ್ಕಿದ್ದೆ
ಬಣ್ಣದ ಕನಸುಗಳೊಂದಿಗೆ
ಗುರುತು ಉಳಿದಿದೆಯಾ..!
ಇಲ್ಲಾ…..
ತೊಳೆದು ಅಳಿಸಿದೆಯಾ?
ನಿನ್ನ ಹೃದಯಂಗಳದಲಿ
ನೆತ್ತರದ ಚಿತ್ತಾರ ಎಳೆದಿದ್ದೆ
ಋಣದ ಭಾರದೊಂದಿಗೆ
ರಂಗೋಲಿ ಮೂಡಿ,
ಆಪ್ತವಾಗಿದೆಯಾ!
ಅನಾಥ ಗರ್ಭಪಾತವಾಗಿದೆಯಾ?
ನಾನು ಹಿಂತಿರುಗುವಾಗ
ಕನಸುಗಳೂರಿದ್ದೆ
ನರ-ನರಗಳ ಬೇರಿಗೂ
ಹಗುರದಿ ಕಳೆ ತೆಗೆದಿದ್ದೆ
ಹಸಿರಾಗಿದೆಯಾ!
ಕಾಂಗ್ರೇಸ್ ಕಸದ ಉಸಿರೇ ಇದೆಯಾ?
ಸುಡು ಬಿಸಿಲಲಿ ನೆರಳನೆಟ್ಟಿದ್ದೆ
ಹಿಡಿತ ಮಿಡಿತದ ಉಸಿರು ಸುಟ್ಟಿದ್ದೆ
ನಿತ್ರಾಣವಾದ ನೆನಪುಗಳ ಹೂತಿಟ್ಟು
ಮಣ್ಣ ತಟ್ಟಿದ್ದೆ
ನಿರೀಕ್ಷೆಗಳು ಅಪ್ಪಿದವೆ!
ನನ್ನ ನೆನಪಲ್ಲೇ ಹಪಾಹಪಿಯಾದವೆ?
ನೀನು ನಗುತ್ತಿರುವ ದಿನಗಳಲಿ ಕತ್ತಲೆಯ ಕಣ್ಣು ಒರೆಸಿದ್ದೆ
ಬೆಳಕ ಬಾಳೆಲೆ ಹಾಸಿದ್ದೆ
ಸುಂದರ ಹಾಗೂ ಮನೋಜ್ಞ ಮನೋಭಾವದ ಸೂಕ್ಷ್ಮ ತಿರುಳು..ಹೊರಟ ದಿಕ್ಕು ಬದಲಾದರೂ ಮನೋಭಾವದ ಮೌಲ್ಯ ಬದಲಾಗಿಲ್ಲ…ಹೃದಯದ ಮೌನ ಮೆರವಣಿಗೆಯ ಮೂಲಕ ಬಿತ್ತರಿಸಿದ್ದು ಸೂಪರ್…