ಹುಷಾರು-ನಿಂಗಮ್ಮ ಭಾವಿಕಟ್ಟಿ ಅವರಕವಿತೆ

ಕಾವ್ಯ ಸಂಗಾತಿ

ಹುಷಾರು

ನಿಂಗಮ್ಮ ಭಾವಿಕಟ್ಟಿ

ಹಳದಿ ಕಣ್ಣುಗಳ ನಡುವೆ ಬದುಕುವುದಿದೆ
ಹೊಟ್ಟೆ ಕಿಚ್ಚಿನ ಝಳ ತಾಕುವುದಿದೆ ಹುಷಾರು

ದುಡಿದು ತಿಂದರೂ ದೂರುವವರ ನಡುವೆ
ತಂಟೆಗೆ ಹೋಗದಿದ್ದರೂ ತಕರಾರು ಬರುವುದಿದೆ ಹುಷಾರು

ಕರೆವ ಹಸು ಎಂದು ರಕ್ತ ಬರುವವರೆಗೂ ಕರೆವ
ಚಿನ್ನದ ಮೊಟ್ಟೆಯ ಕೋಳಿಯ ಕೊಲ್ಲುವವರ ನಡುವೆ ಹುಷಾರು

ಪ್ರೀತಿಯ ನೀಡದ ನೆಮ್ಮದಿ ಸಹಿಸದ ಸ್ವಾರ್ಥಿಗಳ ವ್ಯಂಗ್ಯ
ಇರಿಯುವುದಿದೆ ಹುಷಾರು

ಸುವಾರ್ತೆಗೆ ಕುದಿಯುವ ಕೆಡುಕ ಡಂಗುರದ ಸದ್ದಿಗೆ
ಅಸಮಾಧಾನದ ಜ್ವಾಲಾಮುಖಿ ಉಕ್ಕುವುದಿದೆ ಹುಷಾರು

ಮೌಢ್ಯದ ಸುಳಿಗೆ ಸಿಕ್ಕವರ ಸೆಳೆತವಿದೆ (ಮಾದಕ) ಸತ್ತಂತ ವರೊಡನೆ ಇನ್ನೂ ಬದುಕುವುದಿದೆ ಹುಷಾರು


Leave a Reply

Back To Top