ಸೋಷಿಯಲ್ ಮೀಡಿಯಾ-ಲಕ್ಷ್ಮೀದೇವಿ ಪತ್ತಾರ ಕವಿತೆ

ಕಾವ್ಯ ಸಂಗಾತಿ

ಲಕ್ಷ್ಮೀದೇವಿ ಪತ್ತಾರ

ಲಕ್ಷ್ಮೀದೇವಿ ಪತ್ತಾರ

ಒಂದುಕಡೆ
ಎಲೆ ಮರಿ ಹೂವು ಹಣ್ಣುಗಳಿಗೆ ಪವಾಡ
ಸದೃಷದಿ ಬೆಳಕಿಗೆ ತಂದ ಪುಣ್ಯ
ನಿರಾಶ್ರಿತರಿಗೆ, ಬದುಕುವ ಆಸೆ ಬಿಟ್ಟು ಕೈ
ಚೆಲ್ಲಿದವರಿಗೆ ದಡ ಸೇರಲು ಹುಲುಕಡ್ಡಿ ಆಸರೆ, ಧನ್ಯ

ಸುಂದರ ಪ್ರಕೃತಿ, ದೇವಸ್ಥಾನಗಳ ಅನಾವರಣ
ಪ್ರತಿಭೆಗಳಿಗೆ, ಸಾಧಕರಿಗೆ ವೇದಿಕೆ ಹೃನ್ಮನ
ಭರಪೂರ ಮನೋರಂಜನ

ಜ್ಞಾನರ್ಜನೆಗೆ ಕಲೆ, ಸಾಹಿತ್ಯ ವಿಜ್ಞಾನ
ತಂತ್ರಜ್ಞಾನ ಭಾರಿಔತಣ
ದೇಶ ವಿದೇಶಗಳ ಬಿಸಿ ಬಿಸಿ ಸುದ್ದಿ ಪ್ರತಿಕ್ಷಣ
ಅಂಗೈಯಲ್ಲೇ ಪ್ರಪಂಚ, ಆರ್ಡರ್ ಮಾಡಿದ್ದು ಮನೆ ಬಾಗಲಿಗೆ ತತಕ್ಷಣ

ಮತ್ತೊಂದುಕಡೆ
ಖಾಸಗಿ ಬದುಕು ಹರಾಜು ಮನದ ಅತ್ಯಾಚಾರ
ಮಾನಿನಿಯರ ಅತ್ಯಾಚಾರದ್ದೆ ಪ್ರಸಾರ
ಕೆಲಸವಿಲ್ಲದವರ ಬಾಯಿಗೆ ಆಹಾರ
ಬಿಡಾಡಿ ದನಗಳಿಗೆ ಬಿಟ್ಟಿ ಪ್ರಚಾರ

ಹಲವು ಮಾಧ್ಯಮಗಳ ಮಾಯಾಜಾಲದಲಿ
ಬೆಳೆಯುವ ಸಿರಿಗಳು ಕಮರಿ ಪಾಲಕರ ಕಣ್ಣಿರಧಾರೆ
ಕೆಟ್ಟದರ ವೈಭವೀಕರಣ, ಬೆಸತ್ತ ಜೀವಗಳ ಮರಣ
ಕೆಲಸ ಸ್ಥಗಿತ, ಕಣ್ಣು, ನೆತ್ತಿ ಬಿಗಿತ
ಸಾಮಾಜಿಕ ಮಾಧ್ಯಮದ ಅತಿಬಳಕೆಯ ಉಡುಗೊರೆ


One thought on “ಸೋಷಿಯಲ್ ಮೀಡಿಯಾ-ಲಕ್ಷ್ಮೀದೇವಿ ಪತ್ತಾರ ಕವಿತೆ

Leave a Reply

Back To Top