ಗಝಲ್

ಕಾವ್ಯ ಸಂಗಾತಿ

ಗಝಲ್

ಆಸೀಫಾ

ಭಾವನೆಗಳಿಗೆ ಬೆಂಕಿ ಹಚ್ಚಿ ಜಗವು ನಗುತಿದೆ ಹೇಗೆ ತಡೆಯೊಡ್ಡಲಿ
ತಲೆಮಾರುಗಳ ತುಳಿತ ಇನ್ನೂ ಸಾಗುತಿದೆ ಹೇಗೆ ತಡೆಯೊಡ್ಡಲಿ

ಕೊನರಿದ ಕಹಿ ಸತ್ಯಕೆ ಕಲ್ಲೆಸೆದು ಕೊಲ್ಲುತಿಹರು ಕಂಡಕಂಡವರು
ಹಾಲಿನಲ್ಲಿ ಹಾಲಾಹಲದ ನೊರೆ ಜಿನುಗುತಿದೆ ಹೇಗೆ ತಡೆಯೊಡ್ಡಲಿ

ಎಲ್ಲ ಬಲ್ಲವರೆಂದು ಬಯಲಲ್ಲಿ ಬೆತ್ತಲಾಗುತಿಹರು ನೋಡಿದೆಯಾ
ಮುಖದ ಮೇಲೊಂದು ಮುಖವಾಡ ಮಾತಾಡುತಿದೆ ಹೇಗೆ ತಡೆಯೊಡ್ಡಲಿ

ಅದೇ ಸೂರ್ಯ ಚಂದ್ರ ಅದೇ ಬಾನು ಭೂಮಿ ಮತ್ತೆಲ್ಲಿ ಕಾಲ ಬದಲಾಗಿದೆ
ಕಾಲಚಕ್ರವದು ಕಾಲಿಗೆ ಸಿಕ್ಕವರ ತುಳಿಯುತಿದೆ ಹೇಗೆ ತಡೆಯೊಡ್ಡಲಿ

ಮಾತಿನ ಮಂತ್ರ ಹೇಳಿ ಮಾವುದುರಿಸುತಿಹ ಮಹನೀಯರ ದಂಡು ನೋಡು
ನಂಬಿಕೆಯ ತಲೆ ನೇವರಿಸಿ ನೇಣಿಗೇರಿಸಲಾಗುತಿದೆ ಹೇಗೆ ತಡೆಯೊಡ್ಡಲಿ

ಧರ್ಮಗಳ ನೈವೇದ್ಯದಲಿ ಕರ್ಮಗಳ ಮರೆತೇ ಹೋದರಲ್ಲ ಭಕುತರು
ದೇವರಿಗೂ ಧರ್ಮದ ಸಂಕೋಲೆ ಬಿಗಿಯಲಾಗುತಿದೆ ಹೇಗೆ ತಡೆಯೊಡ್ಡಲಿ

ಸ್ವತ್ತಿನ ಮತ್ತೇರಿದೆ,ಇವರಿಗೇಕೆ ಮಧುಶಾಲೆ ಸಾಕಿಯ ನಂಟು ಆಸೀ
ನೇರ ನುಡಿದವರ ಕರೆದು ಕತ್ತು ಹಿಸುಕಲಾಗುತಿದೆ ಹೇಗೆ ತಡೆಯೊಡ್ಡ


Leave a Reply

Back To Top