ಕಾವ್ಯ ಸಂಗಾತಿ
ವಿರಹಿ ರಾಧೆ
ಸ್ಮಿತಾ ರಾಘವೇಂದ್ರ
ಕಾಡಿದೆ ಏತಕೋ ಈ ಪರಿಯಲ್ಲಿ
ಕೃಷ್ಣನ ಕೊಳಲಿನ ರಾಗ
ಎಷ್ಟೇ ನುಡಿಸಲಿ ಬೇಸರ ನೀಗದು
ನಿನ್ನೆಡೆ ಮುಗಿಯದ ಮೋಹ||
ಎಂದಿಗೆ ಬರವನೋ ಅರಿಯೆನು ನಾನು
ಕಾದೇ ಇರುವೆನು ಕಾವಳದಿ
ಬೆಳಕನು ಹರಿಸೋ ರಾಗವ ಸೂಸಿ
ನಿನ್ನಯ ನೆನಪೇ ತನುಮನದೀ||
ಶ್ಯಾಮನ ಪ್ರೀತಿಯ ಸುಂದರ ನೆನಪು
ಯಮನೆಯ ಮಡಿಲಿನ ತಟದಲ್ಲಿ
ಬಿಡದೇ ಕಾಡುವ ಮಧುರೆಯ ಮೋಹನ
ಬರುವನೋ ಬಾರನೋ ಇಲ್ಲಿ||
ರಾಗ ಭಾವದಲಿ ಬಣ್ಣದೋಕುಳಿ
ತೋರಿದ ಜಗವನೆ ಬಾಯೊಳಗೆ
ಎಲ್ಲ ಅರಿತೂ ಮೌನವ ತೋರುವ
ರಾಧೆಯ ಪ್ರೀತಿಯ ಕನಸೊಳಗೆ|
ತುಂಬಾ ಚೆಂದದ ಕವಿತೆ ಸ್ಮಿತಾ ಜೀ…. ರಾಧೆ, ಕೃಷ್ಣ, ಪ್ರೀತಿ, ವಿರಹ ಸದಾ ನನ್ನನ್ನು ಕಾಡುತ್ತದೆ