ಪತ್ರಕರ್ತ ಮತ್ತು ಸಾಹಿತಿಯಾಗಿ ಶಿವಾನಂದ ತಗಡೂರ

ಪತ್ರಕರ್ತ ಮತ್ತು ಸಾಹಿತಿಯಾಗಿ

ಶಿವಾನಂದ ತಗಡೂರ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯಮರೆತವರು ಬೇಕಾಗಿಲ್ಲ ಎಂಬುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅವರ ನಿಲುವಾಗಿದೆ..!

ಇಂತಹ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅವರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿದ್ದರಿಂದ ಈ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಂದು ಗೌರವ ಬಂದಂತೆ ಆಗಿದೆ..!

ಹೆಸರೇ ಸೂಚಿಸುವಂತೆ ಈ ಸಂಘದಲ್ಲಿ ಕಾರ್ಯನಿರತರಿಗಷ್ಟೇ ಅವಕಾಶವಿದೆ. ಕಾರ್ಯಮರೆತವರು ನಮಗೆ ಬೇಕಾಗಿಲ್ಲ. ಅಂಥವರ ಅವಶ್ಯಕತೆಯೂ ನಮಗಿಲ್ಲ ಎಂದೂ ಖಂಡತುಂಡವಾಗಿ ಹೇಳುತ್ತಾರೆ ಶಿವಾನಂದ ತಗಡೂರ ಅವರು..!

ಕಾರ್ಯನಿರತ ಯಾವ ಪತ್ರಕರ್ತರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಂಘದ ಸದಸ್ಯತ್ವದ ಕಾರ್ಡ ಬಯಸುವವರು ತಾವು ನಿಜವಾಗಿಯೂ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆಯೇ ಎಂಬುದನ್ನು ತಮ್ಮಷ್ಟಕ್ಕೆ ತಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂಬುದೂ ಅವರ ನಿಲುವಾಗಿದೆ..!

ಸರಕಾರ ರೇಷನ್ ಕಾರ್ಡ ವಿತರಿಸಿದಂತೆ ಎಲ್ಲರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡೋಕಾಗಲ್ಲ. ಕ್ರಿಯಾಶೀಲವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕಾರ್ಡ ನೀಡಲಾಗುತ್ತದೆ ಎಂಬುದು ಶಿವಾನಂದ ತಗಡೂರ ಅವರ ಆದ್ಯತೆಯಾಗಿದೆ..!

ಪತ್ರಿಕಾ ದಿಗ್ಗಜರಾದ ಡಿ.ವಿ.ಗುಂಡಪ್ಪನವರು ಹುಟ್ಟು ಹಾಕಿದ ಹಾಗೂ ಎಚ್.ಎಸ್.ದೊರೆಸ್ವಾಮಿ, ಜಯಶೀಲರಾವ್ ಅವರಂಥ ಅನೇಕ ಮಹನೀಯರು ಮುನ್ನಡೆಸಿಕೊಂಡು ಬಂದ ಸಂಘಟನೆ ಕೆಯುಡಬ್ಲ್ಯುಜೆ. ಇದು ಇಂದು ನಿನ್ನೆ ಹುಟ್ಟಿಕೊಂಡಂಥ ಸಂಘಟನೆಯಲ್ಲ.

ಈ ಸಂಘಟನೆಗೆ ತನ್ನದೇಯಾದ ಒಂದು ಒಳ್ಳೆಯ ಹಿನ್ನೆಲೆ ಹಾಗೂ ಇತಿಹಾಸವಿದೆ. ಸದಸ್ಯರು ಕೆಯುಡಬ್ಲ್ಯೂಜೆ ಸದಸ್ಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂಥ ಒಂದು ಬಲಿಷ್ಠ ಹಾಗೂ ಕ್ರಿಯಾಶೀಲ ಪತ್ರಕರ್ತರ ಸಂಘಟನೆ ಇದಾಗಿದ್ದು, ಸಂಘದ ಕಾರ್ಡ ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಗಳಿಸಲು, ಮತ್ತಿನ್ನಾವುದೋ ದಂಧೆ ನಡೆಸಲು ಯಾವತ್ತೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಶಿವಾನಂದ ತಗಡೂರ ಅವರ ಎಚ್ಚರಿಕೆಯಾಗಿದೆ..!

ಬದ್ಧತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಈ ಸಂಘದಲ್ಲಿ ಅವಕಾಶವಿದೆಯೇ ವಿನ: ಕಾರ್ಯಮರೆತವರಿಗಲ್ಲ. ಐ.ಡಿ. ಕಾರ್ಡಗಾಗಿ ಝೆರಾಕ್ಸ್ ಪೇಪರ ಪ್ರಿಂಟ್ ಮಾಡುವುದನ್ನು ನಾವು ನೋಡಿದ್ದೇವೆ. ಪತ್ರಕರ್ತರೆಂದು ಹೇಳಿಕೊಳ್ಳುವ ಇಂಥವರಿಗೆ ಯಾವ ಕಾರಣಕ್ಕೂ ಸಂಘದ ಸದಸ್ಯತ್ವ ನೀಡಬಾರದು ಎಂದೂ ಸಂಘದ ಪದಾಧಿಕಾರಿಗಳಿಗೆ ಶಿವಾನಂದ ತಗಡೂರ ಅವರು ಸೂಚ್ಯವಾಗಿ ಸದಾಕಾಲವೂ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ..!

ಹಾಗೆಯೇ ಶಿವಾನಂದ ತಗಡೂರ ಅವರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕರಾಗಿ ಬರುತ್ತಿದ್ದಂತೆಯೇ ಕಾರ್ಯನಿರತ ಪತ್ರಕರ್ತರ ಸಂಘಕ್ಕೊಂದು ಘನತೆ ಗೌರವ ಬಂದಂತಾಗಿದೆ. ಅಷ್ಟೇ ಅಲ್ಲ ಈ ಮೊದಲು ಈ ಸಂಘಕ್ಕೆ ಸಲೀಸಾಗಿ ರಬ್ಬರ್ ಸ್ಟಾಂಪು ಪತ್ರಕರ್ತರು ಬಹಳವಾಗಿ ತೂರಿಕೊಂಡಿದ್ದರು. ಅಂತಹ ಅವಕಾಶ ಮತ್ತು ಆ ಹೆಸರಿನಲ್ಲಿ ಸಂಘದ ಹೆಸರನ್ನು ದುರುಪಯೋಗ ಪಡೆಸಿಕೊಳ್ಳುವ ಅವಕಾಶ ಈಗ ಇಲ್ಲದಂತಾಗಿದೆ ಎಂಬುದೇ ನಮಗೆ ಒಂದು ಹೆಮ್ಮೆಯ ವಿಷಯವಾಗಿದೆಯೂ..!

ಇಂತಹ ಶಿವಾನಂದ ತಗಡೂರ ಅವರ ಕಾರಣಕ್ಕೆ ಅವರು ಎರಡನೇ ಸಲವೂ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯರಾಗಿ ಆಯ್ಕೆ ಆಗುವಂತೆ ಆಗಿದೆ..!

# ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವಿರೋಧ ಆಯ್ಕೆವೂ..! —

2018-2022 ಅವಧಿಯಲ್ಲಿ ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶಿವಾನಂದ ಅವರು 2022-2025 ಅವಧಿಗೆ ಮತ್ತೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂಘಕ್ಕೆ ಅವರ ಮೇಲಿನ ವಿಶ್ವಾಸವನ್ನು ಸೂಚಿಸುತ್ತದೆ..!

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಬದ್ಧತೆವುಳ್ಳ ಪತ್ರಕರ್ತರ ಹೆಮ್ಮೆಯ ವಿಷಯವಾಗಿದೆ.

ಸಂಘದ ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ತಗಡೂರು ಮಾತ್ರ ಕಣದಲ್ಲಿ ಉಳಿದಿರುವುದ್ದಿರಿಂದ ಅವಿರೋಧವಾಗಿ ಅವರು ಆಯ್ಕೆಯಾಗುವಂತೆ ಆಯಿತು..!

2018-2022 ಅವಧಿಯಲ್ಲೂ ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶಿವಾನಂದ ತಗಡೂರ ಅವರು ಅವರು 2022-2025 ಅವಧಿಗೂ ಮತ್ತೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂಘಕ್ಕೆ ಅವರ ಮೇಲಿನ ವಿಶ್ವಾಸವನ್ನು ಸೂಚಿಸುತ್ತದೆ..!

1990 ರಲ್ಲಿ ಜನಮಿತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಶಿವಾನಂದ ತಗಡೂರ ಅವರು, ಈ ವಾರ, ಜನವಾಹಿನಿ, ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು ಪ್ರಸ್ತುತವಾಗಿ ವಿಜಯವಾಣಿ ಪತ್ರಿಕೆಯಲ್ಲಿ ಹಿರಿಯ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ..!

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಮಾನ್ಯ ಸದಸ್ಯರಾಗಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜಿಲ್ಲಾ ಸಂಘದ ಅಧ್ಯಕ್ಷರಾಗಿ, 2011 ರಿಂದ 2018 ತನಕ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಅವರು..!

ಅಷ್ಟೇ ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಅವಿರತವಾಗಿ ಹೋರಾಟ ಮಾಡಿ ಮೃತಪಟ್ಟ ಪತ್ರಕರ್ತರಲ್ಲಿ, ತೀವ್ರ ಸಂಕಷ್ಟದಲ್ಲಿದ್ದ ಐವತ್ತಕ್ಕೂ ಹೆಚ್ಚು ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಸರ್ಕಾರದಿಂದ ಕೊಡಿಸಿದ್ದು ಶಿವಾನಂದ ತಗಡೂರು ಅವರ ಸಾಂಘಿಕ ಶಕ್ತಿಗೆ ಹಿಡಿದ ಕನ್ನಡಿಯೂ ಆಗಿದೆ..!

ಒಬ್ಬ ಪತ್ರಕರ್ತ ಯಾವಾಗಲೂ ಸಾಹಿತಿಯಾಗಿ ಸಮಾಜವನ್ನು ನೋಡಬೇಕು. ಅವಾಗಲೇ ಸಮಾಜದ ಅಂಕು — ಡೊಂಕು ಕಾಣಿಸಿವುದು. ಅಲ್ಲದೇ ಒಂದು ರೀತಿಯಲ್ಲಿ ಸಮಾಜವನ್ನು ತಿದ್ದಲು ಮತ್ತು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕೊಂಡ್…


ಕೆ.ಶಿವು ಲಕ್ಕಣ್ಣವರ

Leave a Reply

Back To Top