ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ

ಅನುಸೂಯ ಯತೀಶ್

ಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿದ
ಭಾರತಾಂಬೆಗಿಂದು ಸಡಗರದ ಉತ್ಸವ
ನಮ್ಮೆಲ್ಲರ ಹೆಮ್ಮೆಯ ಸ್ವಾತಂತ್ರ್ಯೋತ್ಸವ
ಎಲ್ಲೆಡೆ ಆಚರಿಸುತಿಹೆವು ಅಮೃತ ಮಹೋತ್ಸವ

ಮನೆ ಮನೆಗಳ ಶಿಖರದಲಿ ಹಾರುತಿದೆ ತಿರಂಗಾ
ಮನದಲಿ ಮೂಡುತಿದೆ ಅಭಿಮಾನದ ತರಂಗಾ
ತಲೆ ಎತ್ತಿ ಮೆರೆಯುತ್ತಿದೆ ನಮ್ಮ ಹೆಮ್ಮೆಯ ಧ್ವಜವು
ಶತ್ರುಗಳ ಹುಟ್ಟಡಗಿಸಿದ ಶೌರ್ಯದ ಪ್ರತೀಕವು

ಸತ್ಯ ಶಾಂತಿ ಅಹಿಂಸೆಗಳೆ ಯುದ್ದಾಸ್ತ್ರವಾಗಿ ಮೆರೆದೆವು
ಶಸ್ತ್ರಾಸ್ತ್ರಗಳೊಡೆಯರ ಗುಂಡಿಗೆಯ ನಡುಗಿಸಿದವು
ಬೆರಗುಗೊಂಡರು ಪರಕೀಯರು ಭಾರತೀಯರ ಕೆಚ್ಚೆದೆಗೆ
ಹೆದರಿ ಬೆದರಿ ಮರಳಿದರು ಬಿಳಿಯರು ತಮ್ಮೂರಿಗೆ

ದೇಶವಂದು ಮೆರೆಯಿತು ಐಕ್ಯತೆಯ ಸವಿಗಾನವಾ
ಎಂದೆಂದೂ ಜೊತೆಯಾಗಿ ಜಾಗೃತರಾಗಿ ಸಾಗುವಾ
ಮಹನೀಯ ತ್ಯಾಗ ಬಲಿದಾನಗಳ ನಿತ್ಯಸ್ಮರಿಸುವಾ
ಹಿರಿಯರ ಸೇವೆ ವ್ಯರ್ಥವಾಗದಂತೆ ನಡೆಯುವಾ

ಮಹತಮ ಸಾಧನೆಯ ಪಥದಲ್ಲಿ ವಿಶ್ವ ಮಾನ್ಯ ಈ ಭಾರತಿ
ನಿರಂತರ ಪ್ರಜ್ವಲಿಸುತಿಹುದು ಭಾರತಾಂಬೆಯ ಕೀರುತಿ
ಸ್ವಾವಲಂಬಿ ಸಾರ್ವಭೌಮ ರಾಷ್ಟ್ರದ ಪ್ರಜೆಗಳು ನಾವಾಗುವಾ
ಭಾಗ್ಯಧಾತೆ ಈ ತಾಯಿಗಾಗಿ ಜೀವ ಮುಡುಪಾಗಿಡುವಾ


Leave a Reply

Back To Top