ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಮತ್ತದೇ ಸುಂದರ ಭಾರತ ರೂಪತಾಳಲಿ

ಲಕ್ಷ್ಮೀದೇವಿ ಪತ್ತಾರ

ಮತ್ತೆ ಕಟ್ಟುವ ನಾವು ರಾಷ್ಟ್ರ ಕಟ್ಟುವ
ಒಡೆದುಹೋದ ರಾಷ್ಟ್ರವು ಒoದುಗೋಡೆ ಕಟ್ಟುವ
ಮತ್ತೆ ಮೊದಲಿನಂತೆ ಕಟ್ಟುವ
ಸಮೃದ್ಧ ಸಿರಿಸಂಪತ್ತಿನ ರಾಷ್ಟ್ರವ

ಹಳ್ಳಿ ಹಳ್ಳಿಯಲ್ಲೂ ನ್ಯಾಯನೀತಿ
ನಮ್ಮವರೆಂದು ಅಪ್ಪಿಕೊಳ್ಳುವ ತ್ಯಾಗ ಪ್ರೀತಿ
ಮತ್ತೆ ಮೂಡಿಬರಲಿ ಅದೇ ಖ್ಯಾತಿ
ಎಲ್ಲಿ ನೋಡಿದರಲ್ಲಿ ಆಗ ಸುಖ ಸಮೃದ್ಧಿ ಹಂಚಿ ಉಣ್ಣುವ ಸನ್ನಡತಿ
ವಿವಿಧತೆಯಲ್ಲಿ ಏಕತೆ ಸಾರುವುದು ನಮ್ಮ ಸಂಸ್ಕೃತಿ

ಪರಕೀಯರ ದಾಳಿಯಿಂದ ನಲುಗಿದೆ ನಮ್ಮ ಸುಸಂಸ್ಕೃತ ಸುಂದರ ಭಾರತ
ಒಳ್ಳೆಯದೆಲ್ಲವೂ ಕೊಳ್ಳೆ ಹೊಡೆದ ಕಳ್ಳರು ಕೆಟ್ಟದನ್ನು ಬಿತ್ತಿ ಹೋದರು

ಇನ್ನಾದರೂ ತಿಳಿಯಬೇಕು ನಾವು
ಖಲರೊಡನೆ ಎಂದಿಗೂ ಸಲ್ಲದು ಸಲುಗೆ ಕೊನೆಗೆ ಕಲಹವು
ಗೊತ್ತಿಲ್ಲ ವೈರಿಗಳಿಗೆ ಎಷ್ಟೇ ಕದ್ದೊಯ್ದರು ಹಾಳು ಮಾಡಿದರು
ಭರತಭೂಮಿ ಪರುಷಮಣಿ ಎಂದು ಬಾರದು ದಾರಿದ್ರ್ಯವು
ಬತ್ತದ ದೇವಗoಗೆ ನಮ್ಮ ಭಾರತಾoಬೆ ಸದಾ ಚಲನಶೀಲಳು

ಸುಂದರ ಹೂತೋಟ ನಮ್ಮ ಭಾರತ
ಬಗೆಬಗೆ ಬಣ್ಣದ ಹೂವುಗಳoತೆ ಜಾತಿಮತ
ವೈವಿಧ್ಯತೆಯಿಂದ ಕಂಗೊಳಿಸಳಿಸುವುದೆ
ಭಾರತದ ವೈಶಿಷ್ಟ್ಯ
ವೈಮನಸ್ಸಿನ ಕಸ ಬಂದಾಗಲೊಮ್ಮೆ ಕಿತ್ತು ಹಾಕುತ್ತ
ಮತ್ತೆ ಕಟ್ಟುವ ನಾವು ರಾಷ್ಟ್ರ ಕಟ್ಟುವ

ಮುತ್ತು ರತ್ನ ವಜ್ರಗಳನ್ನು ಬಳ್ಳದಲ್ಲಿ ಅಳೆಯುವಂತ ಕಲೆ ಸಂಸ್ಕೃತಿಯಿಂದ ತುಂಬಿತುಳುಕುವಂತ
ಮತ್ತದೆ ಶ್ರೀಮಂತ ಸುಂದರ ಬಲಿಷ್ಠ
ರಾಷ್ಟ್ರ ಕಟ್ಟುವ ನಾವು ರಾಷ್ಟ್ರ ಕಟ್ಟುವ


Leave a Reply

Back To Top