ಅಮೃತ ಭಾರತಿ ನಿನಗಿದೋ ಆರತಿ-ಶಾಲಿನಿ ಕೆಮ್ಮಣ್ಣು

ಅಮೃತ ಭಾರತಿ ನಿನಗಿದೋ ಆರ

ಶಾಲಿನಿ ಕೆಮ್ಮಣ್ಣು

ಕೇಸರಿ ಲೇಪಿತ ಕಾಶ್ಮೀರದ ಗರಿ
ಚಂದನವನದ ದಕ್ಷಿಣದ ಸಿರಿ
ವಿಶಾಲ ಮರುಭೂಮಿ ರಾಜಸ್ಥಾನದ ಉರಿ
ಕೊರೆಯುವ ಕಣಿವೆಗಳ ಹಿಮಗಿರಿ
ಹಾಲಿನ ಹೊಳಪಿನ ಹಿಮಾಲಯ ಶಿಖರ
ತಳುಕುಬಳುಕಿನ ನಡು ನದಿಗಳ ಪ್ರಕಾರ
ಸಮೃದ್ಧಿ ನಿನ್ನ ಸೆರಗಿನ ಹಿರಿಮೆ
ಸಂಸ್ಕೃತಿಯ ಕಲರವ ಬಣ್ಣದ ಗರಿಮೆ
ಆರ್ಯ ದ್ರಾವಿಡ ಸಮಾಗಮದ
ಜಾತಿ ಧರ್ಮಗಳ ಹಲವು ಭಾಷೆಗಳ
ಸಂಸ್ಕೃತಿ ಆಚರಣೆಗಳ ಜನಪದ ಸೊಗಡಿನ
ಹಳ್ಳಿಯ ಕಂಪಿನ ಕೃಷಿಯ ಸಂಪತ್ತಿನ
ನಲಿವಿನ ಗೆಲುವಿನ ಚಂದದ ಚೆಲುವಿನ
ವನದೇವತೆಗಳ ಸಸ್ಯರಾಶಿಯ
ಅಂಜದ ಅಳುಕದ ಕೆಚ್ಚೆದೆ ವೀರರ
ಗಟ್ಟಿಗರ ನೆಟ್ಟಿಗರ ಶೂರರ ರಣಧೀರರ
ಸಾಧುಸಂತರ ಕವಿ ವಿದ್ವಾಂಸರ
ಈ ತಲ ಈ ನೆಲ ಈ ಜಲ ಈ ಹೊಲ
ಸಮನ್ವತೆ ಯ ಸಹಬಾಳ್ವೆಯ
ಪ್ರೀತಿಯ ಕಣಜ ಭವ್ಯ ಸಾಮ್ರಾಜ್ಯ
ಭಾರತ ದೇಶ ಸ್ಥಿರತೆಯ ಕೋಶ
ಅಮೃತ ಮಹೋತ್ಸವದೆ ಸ್ವಾತಂತ್ರ್ಯದ ಮನನ
ತಾಯಿ ಭಾರತಿಗೆ ಸಹಸ್ರ ಕೋಟಿ ನಮನ
ತರಲಿ ಅಮೃತದಾರೆ ನಿನಗೆ ನಿತ್ಯ ಚಿರನೂತನ
ಪಟಿಸಲಿ ಎದೆಯಲಿ ಶಾಂತಿಯ ಜತನ
ಬೆಸೆಯಲಿ ಭಾವೈಕ್ಯದ ಮಧುರ ಬಂಧನ
ನನಸಾಗಲ ಭವ್ಯ ಭಾರತದ ಕನಸು ಪ್ರತಿದಿನ
ಹಾರಾಡಲಿ ಮನೆ ಮನೆಯಲಿ ದೇಶಭಕ್ತಿಯ ತ್ರಿವರ್ಣ
ಹರಡಲಿ ಎಲ್ಲೆಡೆ ತ್ಯಾಗ ಶಾಂತಿ ಸಮೃದ್ಧಿಯ ಬಣ್ಣ
ಪಸರಿಸಲಿ ನಿನ್ನ ಕಾಂತಿಯ ಪ್ರಜ್ವಲಿಸುವ ದೀಪ
ಜಗದಗಲಕೆ ಸಾರುತ ಶಾಂತಿ ಸಮಾನತೆಯ ಸಂದೇಶ
ಜಗನ್ಮಾತೆಯ ಮಮತೆಯ ಕುವರಿಯೆ
ಅಡಗಲಿ ದ್ರೋಹದ ಭಯದ ಕಲುಷಿತ ಛಾಯೆ
ಮೊಳಗಲಿ ನಿನ್ನ ವಿಜಯದ ಜಯಭೇರಿಯೆ
ಸ್ವಾತಂತ್ರ್ಯಕ್ಕಾಗಿ ದುಡಿದ ಮಡಿದ
ಸಾವಿರಾರು ತ್ಯಾಗ ಜೀವಿಗಳ
ಹಗಲಿರುಲೆನ್ನದೆ ಗಡಿಯಲಿ ದುಡಿವ ವೀರಯೋಧರ ಸಾಧುಸಂತರ ಮನೆ ಮನೆಗಳಲಿ ತರಲಿ
ನೆಮ್ಮದಿಯ ಸಂವೇದನ ಸಚೇತನ
ತಾಯಿ ಭಾರತಿ ನಿನಗೆ ಗೆಲುವಿನ ಆರತಿ
ಮಾತೆಯ ಒಡಲಿಗೆ ಭಕ್ತಿಯ ದೀಪ್ತಿ


One thought on “ಅಮೃತ ಭಾರತಿ ನಿನಗಿದೋ ಆರತಿ-ಶಾಲಿನಿ ಕೆಮ್ಮಣ್ಣು

  1. ಅರ್ಥಪೂರ್ಣವಾದ ಕವಿತೆ ಧನ್ಯವಾದಗಳು ಮೆಡಂ

Leave a Reply

Back To Top