ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ವೀರ ಯೋಧ

ಅರುಣ ರಾವ್

ಹೇ ಯೋಧ! ಬೇಕೇ ನಮಗೆ ಈ ಯುದ್ಧ
ನಿನ್ನ ಜೀವದ ಬೆಲೆ ಅಮೂಲ್ಯವದು ಗೊತ್ತಾ?
ತೊಟ್ಟಿಲಲಿ ಮಲಗಿರುವ ಕಂದ ಹಾಕುವ ಕೇಕೆ
ನಿನ್ನ ತ್ಯಾಗ ಬಲಿದಾನದ ಪ್ರತಿಫಲವೆ ನಿತ್ಯ||

ಗಡಿಗಳಲ್ಲಿ ನಿಲ್ಲುತ್ತ ಗಡಗಡನೆ ನಡುಗುತ್ತ
ಭಾರತದ ಭಾತೃಗಳ ಅನುಕ್ಷಣವು ಕಾಯುತ್ತಾ
ನೆಮ್ಮದಿಯ ಹಗಲುಗಳ ಸವಿಗನಸ ಇರುಳುಗಳ

ಉಡುಗೊರೆ ನೀಡುತಿಹ ಎಲೆಮರೆಯ ಕಾಯೀತ|

ವೈರಿ ಪಡೆ ಎದುರಾದಾಗ ಅಂಜದಿಹ ಗುಂಡಿಗೆ
ನೆತ್ತರು ಚಿಮ್ಮಿದಾಗಲೂ ಹಿಂಜರಿಯ ಯುದ್ಧಕ್ಕೆ
ಭಾರತಾಂಬೆ ಭಾರತಾಂಬೆ ಎನುವ ಸಂಬಂಧಕೆ
ಉಳಿದೆಲ್ಲ ಬಂಧಗಳ ತಳ್ಳುವನು ಮೂಲೆಗೆ

ಶವ ಪೆಟ್ಟಿಗೆಯಲ್ಲಿ ಮತ್ತೆ ಮಲಗಿದಾಗಲೂ ಗೊತ್ತೆ
ವದನದಲಿ ಮಂದಸ್ಮಿತವಿನಿತೂ ಮಾಸದಾಯಿತೆ!
ತಾಯ ಮಡಿಲಿಗೆ ಶಿಶುವು ನಗುತ ತೆರಳುವ ತೆರದೆ
ಭೂತಾಯಿ ಮಡಿಲಿನಲಿ ಪವಡಿಸಲು ನಿಶ್ಚಿಂತೆ||

ಎನಿತೆನಿತೊ ವೀರ ಸರಮಾಲೆಗಳ ಕೊರಳಿನಲಿ
ಧರಿಸಿ ಕಂಗೊಳಿಪ ಭಾರತಾಂಬೆಯ ಗರ್ಭದಲಿ
ವೀರ ಕಲಿಗಳು ಮತ್ತೆ ನಾಡ ಕಾವ ಸತ್ಪುತ್ರರು
ಕೋಟಿ ಕೋಟಿ ಸಂಖ್ಯೆಯಲ್ಲಿ ಜನಿಸಿ ಬರಲಿ||


2 thoughts on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

  1. ನಿಮ್ಮ ಪ್ರೇರಣೆಯ ಸಾಲುಗಳು, ಆಗಲಿ ಯುವಕರ ವಿವೇಕದ ಹೆಜ್ಜೆಗಳು… ನಿಮ್ಮ ಬರವಣಿಗೆಯ ಸಾರಾಂಶ
    ಆಗಲಿ ದೇಶ ಭಕ್ತರ ಹೆಚ್ಚಿನಾಮ್ಷ … ನಿಮ್ಮ ಲೇಖನಿಯ ಚಳಕ, ಮಾಡಲಿ ಮಕ್ಕಳ ಮೈ ಪುಳಕ… ನಿಮ್ಮ ಯೋಚನಾ ಲಹರಿ, ಹಾಡಲಿ ಗಾಯಕರು ಸರಿಗಮ ತಾಳದಲಿ…

  2. ಬರ್ತಾ ಬರ್ತಾ ನೀವು ಕವಿಗಳೇ ಆಗೋಗ್ತಾ ಇದ್ದೀರಾ

Leave a Reply

Back To Top