ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯದ ಸಿರಿಗಾಗಿ

ವನರಾಗ ಶರ್ಮಾ

ಆತ್ಮನಿರ್ಭರತೆಯ ಬ್ರಿಟಿಷರ ಬಂದೂಕಿನ ಗುಂಡಿಗೆ
ತಲೆಯೆತ್ತಿ ನಡೆದರು ಎಣ್ಣೆಗಾಣವನೆಳೆವ
ಕರಿನೀರಿನ ಕಠಿಣ ಶಿಕ್ಷೆಗೆ
ಸಹಿಸಿದರು ಬೂಟುಕಾಲಿನ ಒದೆತ ತುಳಿತ
ಇಟ್ಟರು ಪ್ರಾಣವನ್ನೇ ಪಣವಾಗಿ, ಅದು ಒಂದೇ ಗುರಿಗಾಗಿ
ಭಾರತಾಂಬೆಯ ಬಿಡುಗಡೆಗಾಗಿ,
ಸ್ವಾತಂತ್ರ್ಯದ ಸಿರಿಗಾಗಿ.
ಹಿಂದುಸ್ತಾನದ ಜೀವನದ ನೇಸರ ಹೂ ಮುದುಡಿ,
ಕವಿದಿತ್ತು ಗಾಢಾಂಧಕಾರ;
ಅಮ್ಮನಿಲ್ಲದಾಗ ಅಮ್ಮನ ಮಹತ್ವ
ಹಣವಿಲ್ಲದಾಗ ಹಣದ ಮಹತ್ವ
ವಿದ್ಯೆಯಿಲ್ಲದಾಗ ಜ್ಞಾನದ, ಮಕ್ಕಳಿಲ್ಲದಾಗ ಮಕ್ಕಳ ಮಹತ್ವ
ಅರ್ಥವಾಗುವಂತೆ, ಕೊರತೆಯಲ್ಲಿ ಅದರ ಅಗತ್ಯದ ಅರಿವು.
ನೀರಿನ ಒರತೆಯೇ ಬತ್ತಿದಾಗ, ಮಳೆಯೇ ಹನಿಯಾದಾಗ,
ಬೆಳೆಯೇ ಬರದಾಗ, ಕತ್ತಲೆಯಲ್ಲಿ ಬೆಳಕಿನ ಮಹತ್ವ ಗೊತ್ತಾದಂತೆ
ಪಾರತಂತ್ರ್ಯದಲ್ಲಿ ಸ್ವಾತಂತ್ರ್ಯದ ಮಹತ್ವ ಅರಿವಿಗೆ ಬರುತ್ತದೆ.
ಅರ್ಥವಾಗಿತ್ತು ಅಂದು ನೊಂದವರಿಗೆ
ಅರಿವ ಮೂಡಿಸಬೇಕಲ್ಲವೆ ? ಅದನ್ನು ಇಂದಿನವರಿಗೆ
ಮತ್ತೆ ಕಳೆದುಕೊಳ್ಳಬಾರದು ಎಂಬ ಜಾಗೃತಿಗೆ..
ಅದಕ್ಕೇ ಇದು ಪ್ರತಿದಿನದ ಉತ್ಸವವಾಗಿ ನೆಲೆಗೊಳ್ಳುವುದಕ್ಕೆ


Leave a Reply

Back To Top