ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಫಿಯಾನ ಗಜಲ್

ನಯನ. ಜಿ. ಎಸ್

ಕಂಗಳೆರಡರ ಸ್ವೇಚ್ಛೆಗೆ ದಿವ್ಯಸ್ವಪ್ನಗಳ ಹಸಿವು
ಮೊಗೆದ ನೆನಪುಗಳಲೇ ಕಡು ವ್ಯಥೆಗೆ ಕಾವು

ವರ್ಷಿಸಿದ ಭಾವವೃಷ್ಟಿಗೆ ಹಗಲಲೇ ಹರಣ
ತಲ್ಲಣಗಳ ಮಂಜರಿಯಲಿ ಮನಕೆ ನೋವು

ಬೊಗಸೆ ಬಯಕೆಗೆ ನಿರ್ಲಿಪ್ತತೆಯಲಿ ನಂಟು
ನಲುಗುವ ಅಸುವಿನಲಿ ಹಿಮ್ಮೆಟ್ಟಿದೆ ಛಲವು

ತುಡಿತಕೆ ಮನ ಮಿಡಿದರಷ್ಟೇ ಸೌಖ್ಯ ಗಾಲಿಬ್
ಒಲ್ಲದಿಹ ಭಾವದಲೆಯಲಿ ದುಃಖತಪ್ತ ಬಲವು

ಹಿತ ಮಾಧುರ್ಯವ ಅರಸುತಿವೆ ನಯನಗಳು
ಮಿಂಚ್ಮಿಂಚಿ ಮಸುಕಾಗುತಿವೆ ನವ್ಯಕ್ಷಣಗಳ ಚೆಲುವು


About The Author

1 thought on “ಕಾಫಿಯಾನ ಗಜಲ್”

Leave a Reply

You cannot copy content of this page

Scroll to Top