ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ
75ರ ನೆನಪಿನಲ್ಲಿ..
ವಿಷ್ಣು ಆರ್. ನಾಯ್ಕ
ತೇಲುತಿದೆ ಭರತ ಭೂಮಿ
ಮುಗಿಲೆತ್ತರ ತೋಷದಿ
ಹಾರುತಿದೆ ‘ತಿರಂಗಾ’
ರಣ ರಣ ಜಯ ಘೋಷದಿ
ಕನಸಿನಂತೆ ಚಲಿಸಿತು
ಎಪ್ಪತ್ತೈದು ವರುಷವು
ಮನಸಿನಾಸೆ ತಿಳಿಸಿತು
ಭರತ ಮಾತೆ ದುಃಖವು
ದಿಕ್ಕು ದಿಕ್ಕು ಆಕ್ರಂದನ
ಬಡವ ದೀನ ರೋದನ
ಹಾರ್ವ ಕಾಗೆ, ಹದ್ದುಗಳಿಗೆ
ಸವಿ ಸವಿ ಸವಿ ಬೋಜನ
ರಾಜಕೀಯ ಚದುರಂಗದಿ
ಸಂವಿಧಾನ ದಾರುಣ
ಸತ್ತ ಬಾಳ ನಡೆಸುತಿರುವ
ಪ್ರಜೆಗೆ ಇಲ್ಲ ಚಿಂತನ
ಸಮಾನತೆ, ಸಾಮರಸ್ಯ
ಸೇರಿರುವುದು ಪುಸ್ತಕ
ಕೋಮು ಜ್ವಾಲೆಯಲ್ಲಿ ಬಳಲಿ
‘ಭಕ್ಷಕ’ನೇ ರಕ್ಷಕ
ಹೊಂಚುತಿರುವ ಸಂಚಿನಲ್ಲಿ
ಗಡಿಯ ಸೀಮೆ ರಾಕ್ಷಸ
ಕಾವ ಕೈಗೆ ರಕ್ಷೆಯಿಹುದೆ
ಮನಕೆ ಇಲ್ಲ ಸಂತಸ
ನೈತಿಕತೆಯ ಮರೆತು ಜನರು
ಬದುಕು ಕಳೆಯುತಿರುವರು
ಕಸಿದು ತಿನ್ವ ಬಾಳ್ವೆಯನ್ನೇ
ಬದುಕು ಎಂದು ಬಗೆವರು
ಅಮ್ಮ , ನಿನ್ನ ‘ಒಡವೆ’ಗಳಿಗೆ
ಕನ್ನ ಹಾಕಿ ನಲಿವರು
ತಮ್ಮ ಸ್ವಾರ್ಥಕಾಗಿ
ನಿನ್ನ ದಾಸ್ಯದಲ್ಲಿ ಬಿಡುವರು
ವಿಷ್ಣು ಆರ್. ನಾಯ್ಕ
ಈ ಸಂದರ್ಭಕ್ಕೆ ತುಂಬಾ ಪ್ರಶಸ್ತವಾಗಿದೆ ಕವನ ವಂದನೆಗಳು.
ಧನ್ಯವಾದಗಳು ಮೇಡಂ
Super
ಧನ್ಯವಾದಗಳು