ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಕಥಾ ಸಂಗಾತಿ

ಯಾರಿಗೆ ಸ್ವಾತಂತ್ರ್ಯ ತಂದು ಕೊಟ್ಟೇವು ನಾವು

ಹಸನ್ ಅಬುಲ್ ಹಸನ್

ಐವತ್ತು ಲಕ್ಷದ ಹೊಚ್ಚ ಹೊಸ ಕಾರಿನಲ್ಲಿ ಕೂತು ನಾಯಕರು ರಭಸದಿಂದ ಹೊರಟಿದ್ದರು ಕಾರೂ ಮಿಂಚುತ್ತಿತ್ತು ಕಾರಿನ ಮುಂಭಾಗ ಕೂತಿದ್ದ ನಾಯಕರೂ ಶುಭ್ರ ಬೆಲೆ ಬಾಳುವ ಸೂಟ್ ನಲ್ಲಿ ಮಿಂಚುತ್ತಿದ್ದರು.  ಸ್ವಲ್ಪ ಹೊತ್ತಿನಲ್ಲಿ ತಮಗೆ ಸಿಗಲಿರುವ ಮಾನ ಮರ್ಯಾದೆಯ ಗುಂಗಿನಲ್ಲಿ ಮನದೊಳಗೆ ನಗುತ್ತಾ ಠೀವಿಯಿಂದ ಕಾರಿನಲ್ಲಿ ಕೂತಿದ್ದರು.  ಸಂತೋಷದ ಅಮಲಿನಲ್ಲಿದ್ದ ನಾಯಕರು ಸಡನ್ ಬ್ರೆಕ್ ನಿಂದ ಬೆಚ್ಚಿ, ಸಿಟ್ಟಿನಿಂದ  ಡ್ರೈವರ್ ನತ್ತ ತಿರುಗಿ “ಯಾಕೋ ಏನಾಯಿತು?” ಎಂದು ಕೇಳಿದರು ಡ್ರೈವರ್ “ಮಾಲಕರೇ ಯಾರೋ ಮುದುಕ ರೋಡ್ ಮಧ್ಯದಲ್ಲಿ ಹೋಗುತ್ತಿದ್ದಾನೆ, ಕಾರಿಗೆ ದಾರಿನೇ ಬಿಡುತ್ತಿಲ್ಲ” ಎಂದನು.  ಕಾರಿನ ಗ್ಲಾಸ್ ಇಳಿಸಿ  ಹೋರ ನೋಡಿದ ನಾಯಕರು ಒಬ್ಬ ಮುದುಕ ಕೈಯಲ್ಲಿ ಬಡಿಗೆ ಹಿಡಿದು ಕುಂಟುತ್ತಾ ಮೆಲ್ಲನೆ ಸಾಗಿದ್ದನು, ಸಿಟ್ಟಿನಲ್ಲಿ “ಏ ಮುದುಕ ದಾರಿ ಪಕ್ಕ ನಡ್ಯಾಕ ಆಗಲ್ಲ ಯಾಕಾದರು ಬರತೀರೋ ರೋಡ್ ಮ್ಯಾಲ ಸಾಯೋಕೆ ಸುಮ್ನೇ ಮನ್ಯಾಗ ಕೂಡಬಾರದಾ? ” ಎಂದು ಬೈದು “ನೀ ಮುಂದೆ ಸಾಗಪ್ಪ” ಎಂದು ಡ್ರೈವರ್ ಗೆ ಹೇಳಿದರು.  ಇವತ್ತು ಸ್ವಾತಂತ್ರ್ಯೋತ್ಸವ ಅದರಲ್ಲೂ 75ನೇ ಅಮೃತ ಮಹೋತ್ಸವ ಆ ಸಮಾರಂಭದ ಮುಖ್ಯ ಅತಿಥಿ ತಾನು ಅಂತದರಲ್ಲಿ ಈ ಯಕಶ್ಚಿತ್  ಮುದುಕ ತನ್ನ ಕಾರ್ ಗೆ ದಾರಿ ಬಿಡದೇ ರೋಡ್ ಮ್ಯಾಲೆ ಸಾಗುತ್ತಿದ್ದಾನೆ ಸೊಕ್ಕು ಅವನಿಗೆ, ಇಂತವರಿಗೆಲ್ಲ ಯಾಕೆ ಸ್ವಾತಂತ್ರ್ಯ ಕೊಡಿಸಿದರೋ? ಎಂದೆಲ್ಲಾ ಬಡಬಡಿಸುತ್ತಾ ಧ್ವಜಾರೋಹಣ ಸಮಾರಂಭದ ಸ್ಥಳಕ್ಕೆ ಬಂದು ಕಾರ್ ನಿಂದಿಳಿದರು ಜಯಘೋಷದೊಂದಿಗೆ ಅದ್ಧೂರಿ ಯ ಸ್ವಾಗತ ಸಿಕ್ಕಿತು, ಸಂತೋಷ ದಿಂದ ಎದೆಯುಬ್ಬಿಸಿ ತಮ್ಮ ಆಸನದತ್ತ ನಡೆದರು. ಅಲ್ಲಿ ಇದ್ದ ಕೆಲ ಸಮಾಜದ ಗಣ್ಯ ವೆಕ್ತಿಗಳೊಡನೆ ಇತ್ತೀಚಿನ ರಾಜಕೀಯ ಸ್ಥಿತಿ ಚರ್ಚಿಸುತ್ತಾ ಕೂತರು. ಬಹಳ ಹೊತ್ತಾದರೂ ಸಮಾರಂಭ ಆರಂಭ ಆಗದೇ ಇದ್ದದು ಗಮನಿಸಿ ಆಯೋಜಕರನ್ನು ಕರೆದು ” ತಡ ಏಕೆ” ಎಂದು ಕೇಳಿದರು, ಆಯೋಜಕರು ವಿನಮೃತೆಯಿಂದ “ಸ್ವಾಮಿ, ಸಮಾರಂಭದ ಅಧ್ಯಕ್ಷರು ಬಂದ ಕೂಡಲೇ ಪ್ರಾರಂಭಿಸುತ್ತೇವೆ, ಅಲ್ಲಿವರೆಗೆ ತಾವು ತಿಂಡಿ ಚಹಾ ಸವಿಯಿರಿ” ಎನ್ನುತ್ತಾ ಅದ್ಯಕ್ಷರು ಬಂದರೆ ಕರೆತರಲು ಹೊರ ಹೋದನು.  ಸ್ವಲ್ಪ ಸಮಯದಲ್ಲಿ ಅದ್ಯಕ್ಷರ ಆಗಮನ ಆಯಿತು, ಅವರನ್ನು ನೋಡಿ ನಾಯಕರು ಅವಾಕ್ ಆದರು, ದಾರಿಯಲ್ಲಿ ಸಿಕ್ಕ ವಯೋವೃದ್ಧ ಅಧ್ಯಕ್ಷತೆ ವಹಿಸಲಿರುವ ಗಣ್ಯ ವೆಕ್ತಿ ಆಗಿದ್ದ, “ಹೋಗಿ ಹೋಗಿ ಈ  ಮುದುಕನ್ನ ಅದ್ಯಕ್ಷ ಮಾಡ್ಯಾರ ತಲಿ ಇಲ್ಲ ಇವರಿಗೆ” ಎಂದು ಗೊಣಗುತ್ತಾ ಕಾಟಾಚಾರಕ್ಕೆ ಎದ್ದು ನಿಂತು ಕೈ ಮುಗಿಯುವ ನಾಟಕ ಮಾಡಿ ಕೃತಕ ಮುಗುಳ್ನಗೆ ತಂದು ಸ್ವಾಗತಿಸಿ ಅವರು ಅದ್ಷಕ್ಷರ ಆಸನ ಅಲಂಕರಿಸಿದಾಗ ತಾವು ಅಸೀನರಾದರು ನಾಯಕರು.  ಅದ್ಯಕ್ಷ ರಿಂದ ಧ್ವಜಾರೋಹಣ ಕಾರ್ಯಕ್ರಮ ಮುಗಿದ ನಂತರ ಸಮಾರಂಭ ಪ್ರಾರಂಭ ಆಯಿತು ಅದ್ಯಕ್ಷರ ಪರಿಚಯ ಮಾಡುತ್ತಾ ಸ್ನಾಗತ ಭಾಷಣಕಾರ ಹೇಳಿದ “ಈ ಸಮಾರಂಭದ ಅಧ್ಯಕ್ಷತೆ ವಹಿಸಿರುವ ಮಹನೀಯರು ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಹಲವು ವರ್ಷ ಜೇಲನಲ್ಲಿ ಕಳೆದ ತ್ಯಾಗ ಬಲಿದಾನದ ಮಹಾನ್ ದೇಶಭಕ್ತರು,  ಸ್ವಾತಂತ್ರ್ಯ ಸಿಕ್ಕ ನಂತರವೂ ಯಾವ ಹುದ್ದೆಗೆ ಅಧಿಕಾರಕ್ಕೆ ಆಸೆ ಪಡದೇ ಸರಕಾರದಿಂದ ಯಾವುದೇ ಸಹಾಯ ಪಡೆಯದೇ ಸ್ವತಂತ್ರವಾಗಿ ಜೀವಿಸುತ್ತಿರುವವರು” ಎಂದೆಲ್ಲ ಪರಿಚಯ ಮಾಡಿದ. ಇದನ್ನು ಕೇಳಿ ನಾಯಕರಿಗೆ ಕಸಿವಿಸಿ ಇವರು ಸ್ವಾತಂತ್ರ್ಯ ಹೋರಾಟಗಾರರೋ ಎಂದು ಆಶ್ಚರ್ಯ.  ಅವರ ಬಗ್ಗೆ ತಾನೂ ಒಂದೆರಡು ಹೊಗಳಿಕೆ ಮಾತು ಹೇಳಿದರು. ಸಮಾರಂಭದ ಅಂತ್ಯದಲ್ಲಿ ಅದ್ಯಕ್ಷರು ಭಾಷಣ ಮಾಡುವ ಸಂಪ್ರದಾಯ, ಅದರಂತೆ  ಅದ್ಯಕ್ಷರು ಮೈಕ್ ಹಿಡಿದು ಒಂದು ಸಲ ಮುಖ್ಯ ಅತಿಥಿಗಳತ್ತ ನೋಡಿ ಸಭಿಕರತ್ತ ಒಮ್ಮೆ ನೋಡಿ “ಮಾತಾಡಲು ಬಹಳ ಇದೆ ಆದರೆ, ಈ ಸಮಯದಲ್ಲಿ ಒಂದೇ ಮಾತು ಹೇಳಬಯಸುತ್ತೇನೆ “ನಾವು ಅಷ್ಟೆಲ್ಲ ಕಷ್ಟ ಪಟ್ಟು ಯಾತನೆ ಅನುಭವಿಸಿ ಯಾರಿಗೆ ಸ್ವಾತಂತ್ರ್ಯ ತಂದು ಕೊಟ್ಟೇವು”.


One thought on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

Leave a Reply

Back To Top