ಸ್ವಾತಂತ್ರ್ಯದ ಅಮೃತ ಮಹೋತ್ಸವ

ಕಾವ್ಯ ಸಂಗಾತಿ

ಅಂದಿನ ದಿನ

ಶ್ರೀಮತಿ ಸುಲಭಾ  ಜೋಶಿ  ಹಾವನೂರ.

ನಾವು ಮರೆತದ್ದನ್ನೇ ಮತ್ತೆ ಬರೆಯುತ್ತಲ್ಲಿದ್ದೇವೆ.
ನಿಂತ ನದಿ ಮತ್ತೆ ಹರಿಯುತ್ತಲಿದ್ದಂತೆ.
ಬಿರುಗಾಳಿಗೆ ಬೇರು ಕಿತ್ತ ವ್ರುಕ್ಷ ಮತ್ತೆ ಚಿಗುರುತ್ತಲಿದ್ದಂತೆ.
ಇಂದಿನ ಈ ವಿಜಯೋತ್ಸವದಂದು.
ನಾವು ಮರೆತದ್ದನ್ನೇ ಮತ್ತೆ ಬರೆಯುತ್ತಲ್ಲಿದ್ದೆವೆ.

ಕಿತ್ತೂರಿನ ಒಬ್ಬಮನುಷ್ಯ.
ಒಂದು ಕುದುರೆ.
ಇರುವ ವರೆಗೂ ಹೋರಾಡುವೆ.
ರಾಣಿಯ ಅಂದಿನ ಆವಾಣಿಗೆ.
ಆಂಗ್ಲಭಟರನ್ನು ವಿಕಲಾಂಗಗೂಳಿಸಿದ.
ಅಂದಿನ ದಿನದ ಆ ಅಕ್ಷರಕ್ಕೆ.
ಇಂದಿನ ರಾಷ್ಟ್ರೀಯತೆಯನ್ನು ಅಡಗಿಸಿಕೂಂಡ.
ಅಂದಿನ ಅರುಣೋದಯದ ಹೂಂಗಿರಣಕ್ಕೆ.
ಗುಲಾಮಗಿರಿಯ ದಿಗ್ಬಂಧನ ದಿಕ್ಕೆಡಿಸಿ.
ಸ್ವಾತಂತ್ರ್ಯದ ಸುಗಂಧ ಸೂಸಿದ.
ಮಂಗಲಕಲಶಕ್ಕೆ.
ಇಂದಿನ ಈ ವಿಜಯೋತ್ಸವದಂದು.
ಸಹಸ್ರ ಸಹಸ್ರ ನಮನಾಂಜಲಿ.

ಚೆನ್ನಮ್ಮ ಕೈಯಲ್ಲಿ ಖಡ್ಗಹಿಡಿದದ್ದು.
ಸೂರ್ಯನೆಂದಿಗೂ ಅಸ್ತಂಗತನಾಗದ ಬ್ರಿಟಿಷ್‌ ಸಾಮ್ರಾಜ್ಯದೆದುರು.
ಅಂದಿನ ದಿನ.
ಕಿತ್ತೂರು ಮಣ್ಣಿನ ವ್ರುಕ್ಷಗಳೆಲ್ಲ ಸ್ವಾತಂತ್ರ್ಯದ.
ವ್ರುಕ್ಷಾತಿ ವ್ರುಕ್ಷಗಳಾದವು.
ತ್ರಿವರ್ಣ ಧ್ವಜವನ್ನು ಅಂದೇ ಅವಳು ಹಾರಿಸಿದ್ದಳು.
ಅಂದೇ ಅವಳದು ಕಣಕಣದಲ್ಲಿ ಸ್ವಾತಂತ್ರ್ಯ, ರಣರಂಗದಲ್ಲಿ ಪರಾಕ್ರಮ.

ವಿಧಿ ವಿರಸದೂಂದಿಗೆ.
ಮನ್ರೋ ಕರಾರಿನೂಂದಿಗೆ.
ಗ್ರುಹ ಭೇದಿಗಳೂಂದಿಗೆ.
ಬಲಪೂರ್ವಕ ಆಕ್ರಮಣದೂಂದಿಗೆ.
ನಾವು ಮರೆತದ್ದನ್ನು ಮತ್ತೆ ಬರೆಯುತ್ತಲಿದ್ದೆವೆ.

ಸ್ಟೀವನ್ ಮತ್ತು ಈಲಿಯಟರನ್ನು.
ಸೆರೆ ಹಿಡಿದರೂ ಸೆರೆಯಾದ.
ಆಂಗ್ಲರ ಪುಟ್ಟ ಮಕ್ಕಳನ್ನು.
ಸೆರೆಯಲ್ಲಿ ಬೆರೆಸದೆ.
ಸೆರಗಿನಿಂದ ತಬ್ಬಿಕೂಂಡ ಚೆನ್ನಮ್ಮನ ಮಮತೆಗೆ.
ಇಂದಿನ ವಿಜಯೋತ್ಸವದ.
ಅಂದಿನ ದಿನಕ್ಕೆ.
ಸ್ವಾತಂತ್ರದ ಅಮ್ರತ ಮಹೂತ್ಸವಕ್ಕೆ
ಸಹಸ್ರ ಸಹಸ್ರ ನಮನ ಸಹಸ್ರ ಸಹಸ್ರ ನಮನ.

————————

ಶ್ರೀಮತಿ ಸುಲಭಾ  ಜೋಶಿ  ಹಾವನೂರ

3 thoughts on “ಸ್ವಾತಂತ್ರ್ಯದ ಅಮೃತ ಮಹೋತ್ಸವ

  1. ಉತ್ತಮ ರಚನೆ ಸುಲಭಾ ಜೋಶಿ ಅವರೆ, ಕಾಗುಣಿತದ ಕಡೆಗೆ ಸ್ವಲ್ಪ ಗಮನ ವಿರಲಿ.

  2. ಸುಲಭಾ ಜಿ…..
    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು.
    ಚೆನ್ನಾಗಿದೆ ನಿಮ್ಮ ರಚನೆ.

Leave a Reply

Back To Top