ಕಲ್ಲುಗಳನ್ನುಏನುಮಾಡುವಿರಿ? ತೇರಳಿ ಎನ್ ಶೇಖರ್ ಕವಿತೆ ವಿಶ್ಲೇಷಣೆ

ಕಾವ್ಯದರ್ಪಣ

ಕಲ್ಲುಗಳನ್ನುಏನುಮಾಡುವಿರಿ?

ಮಲಯಾಳಂ ಮೂಲ-ಶಿಹಾಬುದ್ದೀನ್_ಪೊಯ್ತುಂಕಡವ್

ಕನ್ನಡಕ್ಕೆ-ತೇರಳಿ ಎನ್ ಶೇಖರ್

ಕವಿತೆಯವಿಶ್ಲೇಷಣೆ-ಅನಸೂಯ ಜಹಗೀರದಾರ

ಕಲ್ಲುಗಳನ್ನುಏನುಮಾಡುವಿರಿ?

ನಿನ್ನೆ ಆ ನಾಯಿ ಸತ್ತಿತು

ಇನ್ನು ನಿಮ್ಮ ಕೈಯಲ್ಲಿರುವ

ಕಲ್ಲುಗಳನ್ನು ಏನು ಮಾಡುವಿರಿ?

ಯಾವಾಗಲೂ ವಕ್ರವಾಗಿ ನಡೆವುದನ್ನೆ

ರೂಢಿ ಮಾಡಿಕೊಂಡಿದ್ದರಿಂದ

ಸತ್ತಾಗಲೂ ಅದು ಹಾಗೆಯೇ ಬಿದ್ದುಕೊಂಡಿತ್ತು.

ಯಾಚನೆಯ ಹಾಗೆ ಚಾಚಿಕೊಂಡಿದ್ದ

ಅದರ ನಾಲಿಗೆಯ ತುತ್ತತುದಿಯಲ್ಲಿ

ಒಂದು ಚೂರು ಪ್ರೀತಿಗಾಗಿ ತವಕಿಸುತ್ತಿದ್ದ ಆಸೆ

ಆಗಲೂ ಉಳಿದುಕೊಂಡಿತ್ತು.

ಅದನ್ನು ಅಪಹಾಸ್ಯ ಮಾಡದ

ಯಾವ ನೊಣವೂ

ಆ ಹಾದಿಯಲ್ಲಿ ಹಾದುಹೋದುದಿಲ್ಲ.

ನಿನ್ನೆ ಆ ನಾಯಿ ಸತ್ತಿತು

ಇನ್ನು ನಿಮ್ಮ ಕೈಯಲ್ಲಿರುವ

ಕಲ್ಲುಗಳನ್ನು ಏನು ಮಾಡುವಿರಿ

****

ಮಲಯಾಳಂ ಮೂಲ :

ಶಿಹಾಬುದ್ದೀನ್_ಪೊಯ್ತುಂಕಡವ್

ಅನುವಾದ :#ತೇರಳಿಎನ್ಶೇಖರ್

***************************************************************

ಕವಿತೆಯ ವಿಶ್ಲೇಷಣೆಅನಸೂಯಾ ಜಹಗೀರದಾರ

ತೇರಳಿ ಎನ್ ಶೇಖರ್ .ಅವರ ಮಲಯಾಳಂ ಮೂಲದ ಅನುವಾದ ಕವಿತೆ. ಪ್ರಚಲಿತ ಹಾಗು ನಿರಂತರ ಈ ಲೋಕದ ದೌರ್ಬಲ್ಯಗಳ ಮೇಲೆ ದೌರ್ಜನ್ಯಗಳನ್ನು ಹೇಳುವ ಕವಿತೆ ಇದಾದುದರಿಂದ ಸಹಜವಾಗಿಯೇ ಓದುಗರನ್ನು ತಲ್ಲಣಗೊಳಿಸುವ ಚಿಂತನೆಗೆ ಒಡ್ಡುವ ಕಾಡುವ ಕವಿತೆ ಇದಾಗಿದೆ ಈ ಧ್ವನಿಪೂರ್ಣ ಕವಿತೆ ನನ್ನನ್ನೂ ಕಾಡಿದೆ

ಎಂದೇ ಈ ಅನಿಸಿಕೆ ಹಂಚಿಕೊಳ್ಳುತ್ತಿರುವೆ.

ತಪ್ಪಿ ಆಳಕ್ಕೆ ಬಿದ್ದವಗೆ ಆಳಿಗೊಂದು ಕಲ್ಲು ಅಂದಂತೆ.ಈಗಾಗಲೇ ನೊಂದವಗೆ ಮತ್ತೂ ಉಪದೇಶವೇ…ಬಿದ್ದವಗೆ ಮತ್ತೂ ಅಪಹಾಸ್ಯ, ಅವಮಾನದ ಹೊಡೆತವೆ.‌.! 

#ಅಪಹಾಸ್ಯ #ಮಾಡದ #ಯಾವ #ನೊಣವೂ #ಆ #ಹಾದಿಯಲ್ಲಿ  #ಹಾದುಹೋದುದಿಲ್ಲ….

ಈ ಸಾಲು ಏನೆಲ್ಲ ಹೇಳಬಲ್ಲದು.

ಕೀಟ ಬಾಧೆಯ ಕೀಚಕ ಉಪದ್ರವೂ ಇದೆ. ಎಷ್ಟೊಂದು ಧ್ವನಿಪೂರ್ಣ ಕವಿತೆ..!.ಕೆಟ್ಟ ಸಮಯ ಬಂದಾಗಿನ ಹೃದಯ ವಿದ್ರಾವಕ ಮನುಕುಲ ನಾಚುವ ಕೃತ್ಯಗಳನು ಅದೇ ಮಾನವರಿಂದಲೇ ಕಾಣುತ್ತೇವೆ.ಸಾಯುವವರ ಎದೆ ಬಗೆದು ಸಾಯಿಸುವ, ಮುರಿದ ಹೃದಯವ ಮತ್ತೇ ಮುರಿಯುವ ಗಾಯದ ಮೇಲೆಯೇ ಬರೆ ಎಳೆಯುವ ಅಥವಾ ಉಪ್ಪು ಚಿಮುಕಿಸಿ ಖುಶಿ ಪಡುವ ವಿಕೃತಗಳೇ ಎಲ್ಲ..! ಅಥವಾ ಉಪದೇಶಿಕರೇ ಎಲ್ಲ..! ನಿಜವಾದ ಸಾಂತ್ವನ ಎಂಬುದು ಇದೆಯೆ..? ಸ್ವಾರ್ಥ ಲೋಕದಲಿ..! ನಿಸ್ವಾರ್ಥ ಪ್ರೇಮ ಅನ್ನುವುದು ಇದೆಯೆ..?  ಈ ಲೋಕದಲಿ.?

ಕಲ್ಲುಗಳ ಏನು ಮಾಡುವಿರಿ..?

ಕೊನೆಗೂ ಪ್ರಶ್ನೆಯೊಂದು ಇಡುತ್ತ ಕವಿತೆ ಮುಗಿಯುವುದಿಲ್ಲ. ಬದಲಾಗಿ ಓದುಗರಿಗೆ ಪ್ರಶ್ನೆಯೊಡ್ಡತ್ತ ಮತ್ತೊಂದು ಸುಳಿವು ಕೊಡುತ್ತದೆ. ಅಂದರೆ ಮತ್ತೊಂದು ನಾಯಿಯ ಬೇಟೆ ನಾಳೆಯಿಂದ.. ಈ ನಿಷ್ಕರುಣಿ  ಕಲ್ಲುಗಳಿಗ ಕೆಲಸ ಇಲ್ಲದೆ ಸುಮ್ಮನಿರಲು ಹೇಗೆ ಸಾಧ್ಯ..?

ಜನಾಂಗೀಯ ದ್ವೇಷ, ಮತ್ಸರ, ಕುಹಕ ಕಟುಕ ವರ್ತನೆ, ಅಸೂಯೆ, ಮುಗಿಯದ ದಾಹವೇ ಸರಿ..ಅದಕ್ಕೆ ನೀರಲ್ಲ ರಕ್ತ ತರ್ಪಣದ ಬಯಕೆ..!

ಚೆಂದದ ಅನುವಾದ.. ನಿಮ್ಮದು..!

ಓದುವುದೇ ಚೆನ್ನ ಅದರೊಂದಿಗೆ ಸ್ವಯಂ ಚಿಂತನೆಗೆ ಒಡ್ಡಿಕೊಳ್ಳುವ ಕವಿತೆಯಿದು.

Malayalam poem of Shihabudheen_Poithumkadave

Kannada translation by #Therly_N_Shekhar

#ಕಲ್ಲುಹಿಡಿದವರನುಕನಿಕರಿಸಿ

ಕಲ್ಲುಗಳನ್ನುಏನುಮಾಡುವಿರಿ?

ನಿನ್ನೆ ಆ ನಾಯಿ ಸತ್ತಿತು

ಇನ್ನು ನಿಮ್ಮ ಕೈಯಲ್ಲಿರುವ

ಕಲ್ಲುಗಳನ್ನು ಏನು ಮಾಡುವಿರಿ?

ಯಾವಾಗಲೂ ವಕ್ರವಾಗಿ ನಡೆವುದನ್ನೆ

ರೂಢಿ ಮಾಡಿಕೊಂಡಿದ್ದರಿಂದ

ಸತ್ತಾಗಲೂ ಅದು ಹಾಗೆಯೇ ಬಿದ್ದುಕೊಂಡಿತ್ತು.

ಯಾಚನೆಯ ಹಾಗೆ ಚಾಚಿಕೊಂಡಿದ್ದ

ಅದರ ನಾಲಿಗೆಯ ತುತ್ತತುದಿಯಲ್ಲಿ

ಒಂದು ಚೂರು ಪ್ರೀತಿಗಾಗಿ ತವಕಿಸುತ್ತಿದ್ದ ಆಸೆ

ಆಗಲೂ ಉಳಿದುಕೊಂಡಿತ್ತು.

ಅದನ್ನು ಅಪಹಾಸ್ಯ ಮಾಡದ

ಯಾವ ನೊಣವೂ

ಆ ಹಾದಿಯಲ್ಲಿ ಹಾದುಹೋದುದಿಲ್ಲ.

ನಿನ್ನೆ ಆ ನಾಯಿ ಸತ್ತಿತು

ಇನ್ನು ನಿಮ್ಮ ಕೈಯಲ್ಲಿರುವ

ಕಲ್ಲುಗಳನ್ನು ಏನು ಮಾಡುವಿರಿ?

ಮಲಯಾಳಂ ಮೂಲ :

#ಶಿಹಾಬುದ್ದೀನ್_ಪೊಯ್ತುಂಕಡವ್

ಅನುವಾದ :#ತೇರಳಿಎನ್ಶೇಖರ್


4 thoughts on “ಕಲ್ಲುಗಳನ್ನುಏನುಮಾಡುವಿರಿ? ತೇರಳಿ ಎನ್ ಶೇಖರ್ ಕವಿತೆ ವಿಶ್ಲೇಷಣೆ

  1. ಹೌದು ಮೇಡಮ್.
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಖುಶಿಯಾಯ್ತು.

  2. ಅತ್ಯುತ್ತಮ ವಿಮರ್ಶೆ… ಕಟುವಾಸ್ತವದ ಹಸಿ ಸತ್ಯವಿದು ಎಂದರೆ ತಪ್ಪಾಗಲಾರದು..

Leave a Reply

Back To Top