ಧಿಕ್ಕಾರವಿರಲಿ,ನಿಂಗಮ್ಮ ಭಾವಿಕಟ್ಟಿಯವರ ಕವಿತೆ.

ಕಾವ್ಯ ಸಂಗಾತಿ

ಧಿಕ್ಕಾರವಿರಲಿ

ನಿಂಗಮ್ಮ ಭಾವಿಕಟ್ಟಿ

ಧಿಕ್ಕಾರವಿರಲಿ ದಯವಿರದ ಚೆಲುವಿಗೆ ಮನಸಿರದ ಒಲವಿಗೆ ನ್ಯಾಯವಿರದ ಗೆಲುವಿಗೆ

ಧಿಕ್ಕಾರವಿರಲಿ ದಾನವಿರದ ಕೈಗಳಿಗೆ ದಣಿವರಿಯದ ಕಾಲ್ಗಳಿಗೆ ಕರುಣೆ ಇರದ ಕಣ್ಗಳಿಗೆ

ಧಿಕ್ಕಾರವಿರಲಿ ಅನ್ನದಾತನ ಆಡಿಕೊಂಡರೆ ಚಿನ್ನದಾಸೆಗೆ ಮಾನ ಮರೆತರೆ, ಮಣ್ಣ ಬೆಲೆಯನರಿಯದವನಿಗೆ

ಧಿಕ್ಕಾರವಿರಲಿ ಸೋತವರಿಗೆ ಕರಗದವರಿಗೆ ನೊಂದವರಿಗೆ ಮರುಗದವರಿಗೆ ಬಿದ್ದವನೆತ್ತದವಗೆ

ಧಿಕ್ಕಾರವಿರಲಿ ದುಡಿಯದೇ ತಿನ್ನುವವಗೆ ಕಲ್ಲಿಗೆ ಪೂಜಿಸುವವಗೆ ಹಸಿದವನತ್ತ ನೋಡದವಗೆ

ಧಿಕ್ಕಾರವಿರಲಿ ಹೆತ್ತವರ ನಿರ್ಲಕ್ಷಿಸುವವಗೆ ಅಷ್ಟಮದಗಳ ಸ್ವಾರ್ಥಿಗಳಿಗೆ
ಋಣದೊಳಿರುವ ಕೃತಘ್ನರಿಗೆ

ಸತ್ಕಾರ ಸಿಗಲಿ ಸವೆಯುವವಗೆ
ನಿಸ್ವಾರ್ಥಿಗೆ, ಬಂದುದುಂಡು ತೃಪ್ತಿಹೊಂದೋ ಸಂಸ್ಕಾರವಂತರಿಗೆ.


ನಿಂಗಮ್ಮ ಭಾವಿಕಟ್ಟಿ

Leave a Reply

Back To Top