ಸಂಜೆ-ಸೂರ್ಯ-ಅಬ್ಳಿ,ಹೆಗಡೆ ಕವಿತೆ

ಕಾವ್ಯ ಸಂಗಾತಿ

ಸಂಜೆ-ಸೂರ್ಯ

ಅಬ್ಳಿ,ಹೆಗಡೆ

ಸಂಜೆಯಾಗಸದಲ್ಲಿ,
ಮೋಡದ ಮರೆಯಲ್ಲವಿತು
ಆಗಾಗ ಹಣಕಿಕ್ಕುವ,
ಸಂಜೆ-ಸೂರ್ಯ,,,,,,,,
ಮೌನದಾಳದಲ್ಲಿ,
ಅವಿತು ಕುಳಿತಿರುವ
ಮಾತಿನಂತೆ.
ವಿರಳ,,,ಮಾತು-
ಗಳಲ್ಲಿ,ಹುದುಗಿರುವ
ಗೂಢಾರ್ಥದಂತೆ.
ತಪ್ಪುಮಾಡಿ,
ಅಮ್ಮನ ಭಯಕ್ಕೆ,
ಬಾಗಿಲಮರೆಯಲ್ಲಿ,
ಬಚ್ಚಿಟ್ಟುಕೊಂಡಿರುವ
ತುಂಟ,ಮಗುವಿನಂತೆ.
ನಿಧಾನಕ್ಕೆ ಹೊರ ಬರಲು
ಹವಣಿಸುತ್ತಾನೆ.
ನನಗೊ,,ಸ್ಪಷ್ಟತೆಯ
ಬೆಳಕಲ್ಲಿ,ಇಲ್ಲದ
ಅರ್ಥಗಳು,ಅನಾವರಣ
ಗೊಳ್ಳುವ ಭಯ.


Leave a Reply

Back To Top