ಕಾವ್ಯ ಸಂಗಾತಿ
ಗಜಲ್
ಸುಮಾ
ಮತ್ತು
ರತ್ನರಾಯಮಲ್ಲ
ಜುಗಲ್ ಬಂಧಿ ಗಜಲ್
ಕನಸಲ್ಲೂ ನಿನ್ನೆ ಕನವರಿಸಿದ್ದು ತಪ್ಪಾ
ಮನದಲೂ ನಿನ್ನೆ ಆರಾದಿಸಿದ್ದು ತಪ್ಪಾ
ತಪ್ಪೇನಿಲ್ಲವೆಂದು ಚುಂಬಿಸಿದ್ದು ತಪ್ಪಾ
ಮನದಂತೆ ತನು ಆಲಂಗಿಸಿದ್ದು ತಪ್ಪಾ
ಆಲಿಂಗನದಲಿ ನಿನ್ನೊಲವ ಕಂಡೆನಲ್ಲ
ನಿನ್ನ ಜೊತೆ ಬೇಕೆಂದು ಹಂಬಲಿಸಿದ್ದು ತಪ್ಪಾ
ತಪ್ಪೆಂದರೆ ತಪ್ಪಾದೀತು ಮನದರಸಿ
ನಿನ್ನ ಜೊತೆ ಸಮಾಜ ಅನುಸರಿಸಿದ್ದು ತಪ್ಪಾ
ಪ್ರೇಮದ ಸುಮವ ಅರಳಿಸಿದ್ದು ತಪ್ಪಾ
ಅರಳಿದ ಮಲ್ಲಿಗೆ ಅವಲಂಬಿಸಿದ್ದು ತಪ್ಪಾ