ಕಾವ್ಯ ಸಂಗಾತಿ
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ಆಗೆಲ್ಲ ಕವನೋದ್ಭವ ಆಗುತ್ತಿತ್ತು ಬ್ರೌನ್ ರ ಸಾಲುಗಳಿಂದ
“ನನ್ನ ಪ್ರೀತಿಯ ಹುಡುಗಿ
ಗುಲಾಬಿಯ ಅತಿ ಚಂದ”
ಅವಳುದ್ದ ಜಡೆ ನೋಡು
ಆ ನಗು ನೋಡು
ಕೆನ್ನೆಯ ಗುಳಿ ನೋಡು
ಮತ್ತೆ ಹಿಂದಿಂದೇ ಓಡು
ನಲವತ್ತು ಮೀರಿದಾಗ
ಸಾಧನೆಯ ಮೇರೆ ಮೀರಿದಾಗ
ಅಶ್ವಮೇಧಕ್ಕೆ ಕುದುರೆ ಕಟ್ಟುವ ತವಕ ಪ್ರಪಂಚ ಹಿಡಿದಿಡುವ ತವಕ
ಅಪ್ಪ ಅಮ್ಮರಿಗಿನ್ನೂ ಕಂದ
ನನ್ನವಳ ಅಂದ ಚೆಂದ
ಮಕ್ಕಳಿಂದ ತೀರದ ಆನಂದ
ಸಾಗುತ್ತ ಸಾಗುತ್ತ
ಬದುಕಿನ ವೇಗಕ್ಕೆ ಏದುಸಿರು
ಬಂದಾಗ
ಈ ಆತ್ಮಕ್ಕೆ ನಿನ್ನ ನೆನಪು
ಪರಮಾತ್ಮ ನಿನ್ನ ಒನಪು
ದಿನ ವರ್ಷ ತಿಥಿ ಮಾಸ
ಕಳೆದದ್ದೆ ತಿಳಿಯಲಿಲ್ಲ
ಈಗ ನಿಮ್ಮ ಪಾದ ಸ್ಮರಣೆ!
“ಮರಹು ಘನ
ನಿಮ್ಮ ನೆನೆವ ಮನ
ಕಿರಿದೆನ್ನ ಬಹುದೇ!
-ಬಾರದಯ್ಯ”
ಅಣ್ಣ ಬಸವಣ್ಣರ ವಚನ
ದೇಹ ಕಾಲ ಮಾನಗಳ ಎಲ್ಲೆ
ದಾಟಿ
ನಿನ್ನ ಭಜಿಸುವ ಮನಸ್ಸು
ಪರಾಕಾಷ್ಠೆ ತಲುಪಿ
ನಾ ದೀನ!
ನಿಮ್ಮ ಸೊಗಸು ಸಂಭ್ರಮ
ಭಕ್ತಿ ಭಜನೆಗಳಿಂದ
ವಿಕಸಿತ ವನಸುಮ
ಮುಂದೊಂದು ದಿನ
ಬಾಡಿ ಹೋಗುವ ಸಂಭ್ರಮ
ಅಂತಿಮ ಚರಣ
ಅಂತಿಮ ಚಕ್ರ
Super Bhavoji
Thank you Sona
ಹುಡುಗಿಯ ಅಂದ ಚೆಂದದಿಂದ, ಮೇಲೆದ್ದು, ಬಾಡಿ ಹೋಗುವ ಈ ಜೀವನದ ವಿಕಸನದ ವಿವರಣೆ ಸೂಪರ್, ವೆಂಕಣ್ಣ.
Very nice
Thank you Anu
ಧನ್ಯವಾದಗಳು ಸೂರ್ಯ!
Super
ತುಂಬಾ ಚೆನ್ನಾಗಿದೆ ವೆಂಕಣ್ಣಾ.
ತುಂಬಾ ಧನ್ಯವಾದಗಳು ಮಂಜುನಾಥ್!