ಕಾವ್ಯ ಸಂಗಾತಿ
ಗಜಲ್
ವಾಣಿ ಯಡಹಳ್ಳಿಮಠ
ಕೊಡು ಎಂದರೆ ಕೊಡಲೀಗ
ಏನೂ ಉಳಿದಿಲ್ಲ
ಮನದ ಜೋಳಿಗೆಯಲ್ಲೀಗ
ಭಾವನೆಗಳು ಉಳಿದಿಲ್ಲ
ಇರಲು ಬಂದವರೆಲ್ಲ
ಇರಿದಿರಿದು ಹೋದರು .
ಒಲವಿನ ಒಡಲಿನಲ್ಲೀಗ
ಒನಪು ಉಳಿದಿಲ್ಲ
ಮಾತುಗಳು ಮೌನದ ಮಡಿಲು
ಬಯಸಿ ದೂರ ಸಾಗಿವೆ .
ಪೋಣಿಸಲು ಪದಗಳಲ್ಲೀಗ
ಪುಳಕ ಉಳಿದಿಲ್ಲ
ಎದೆಯ ಗೋಡೆಯ ತುಂಬಾ
ನೆತ್ತರಿನ ಕಲೆಗಳೇ ,,
ನೇವರಿಸಿ ಬಳಿಯಲೀಗ
ಹೊಸ ಬಣ್ಣ ಉಳಿದಿಲ್ಲ
ನಿಂತು ಏಕಾಂತದ ಸಂತೆಯಲಿ
ಸ್ನೇಹ ಅರಸಿದೆಯಾ ವಾಣಿ?
ಅರಳಿಸಿ ಹಸಿರಾಗಿಸಲೀಗ
ಹಳೆ ಆಸರೆ ಉಳಿದಿಲ್ಲ
Very nice madam, keep going